ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕರುಣಾನಿಧಿ ವಿರುದ್ಧ ರಾಜ್ಯದಲ್ಲೂ ಕೇಸು ದಾಖಲು
ರಾಮನನ್ನು ಹೆಂಡ ಕುಡುಕ ಎಂದು ಹೀಗೆಳೆದ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ವಿರುದ್ಧ ರಾಜ್ಯದಲ್ಲಿ ಮೊದಲ ಕಾನೂನು ಸಮರ ಆರಂಭವಾಗಿದೆ.ಈ ಹೇಳಿಕೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ವಿಮಲನಾಥನ್, ರಾಜಶೇಖರ್ ಮತ್ತು ಚೇರನ್ ಎಂಬುವರು ಕರುಣಾನಿಧಿ ವಿರುದ್ಧ ನಗರದ 3ನೇ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ದುರು ದಾಖಲಿಸಿದ್ದಾರೆ.

ಅರ್ಜಿದಾರರ ಪರ ವಕೀಲ ಸೂರ್ಯಪ್ರಕಾಶ್ ದಾವೆಯಲ್ಲಿ ಒಂದು ಧರ್ಮವನ್ನು ಹಿಯಾಳಿಸುವುದು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಒಂದು ವೇಳೆ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ. ಇದಕ್ಕೆ 3ರಿಂದ 6 ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಅವರು ಹೇಳಿದ್ದಾರೆ. ಕರುಣಾನಿಧಿ ಅವರ ಹೇಳಿಕೆಯಿಂದ ತಮ್ಮ ಕಕ್ಷಿದಾರರ ಧರ್ಮವನ್ನು ಹಿಯಾಳಿಸಿದಂತಾಗಿದ್ದು, ಅವರ ಧಾರ್ಮಿಕ ಭಾವನೆಗಲಿಗೆ ಧಕ್ಕೆ ಯಾಗಿದೆ.

ಅವತಾರ ಪುರುಷ ಶ್ರೀರಾಮನನ್ನು ಅವಹೇಳನೆ ಮಾಡಿದ್ದಾರೆ. ಆದ್ದರಿಂದ ಅವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಅ. 11ಕ್ಕೆ ನಿಗದಿ ಪಡಿಸಿದ್ದಾರೆ.
ಮತ್ತಷ್ಟು
ಬಳ್ಳಾರಿ ನೆಪ: ಬಿಗಡಾಯಿಸಿದ ಪರಿಸ್ಥಿತಿ
ಅಧಿಕಾರ ಹಸ್ತಾಂತರ ಅವಾಂತರ
ಕರ್ನಾಟಕದಲ್ಲಿ ಜೆಡಿಎಸ್ ಅಧಿಪತ್ಯ
ಜೆಡಿಎಸ್ ರಾಗ ಬದಲು
ಬಿಜೆಪಿ ಸಚಿವರ ಸಾಮೂಹಿಕ ರಾಜೀನಾಮೆ?
ವಿದ್ಯುತ್ ಬೇಡಿಕೆ ಪೂರೈಕೆಗೆ ಹೊಸ ಯೋಜನೆ