ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕೆಲಸಕ್ಕೆ ಬಿಜೆಪಿ ಸಚಿವರ ಗೈರು ಹಾಜರಿ
ಸಾಮೂಹಿಕವಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ ನಂತರ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೂಚನೆಗೂ ಕಾಯದ ಮಿತ್ರ ಪಕ್ಷ ಬಿಜೆಪಿಯ ಸಚಿವರುಗಳು ಇಂದಿನಿಂದ ಕೆಲಸಕ್ಕೆ ಗೈರು ಹಾಜರಾಗುವ ನಿರ್ಧಾರ ತೆಗೆದುಕೊಂಡು ಕೆಲಸಕ್ಕೆ ಹಾಜರಾಗಿಲ್ಲ.

ಕೆಲ ಸಚಿವರಂತೂ ಸರಕಾರದ ವಾಹನಗಳನ್ನು ಮರಳಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಸುರೇಶ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ರಾತ್ರಿ ಬಿ. ಎಸ್. ಯಡಿಯೂರಪ್ಪ ಅವರ ನೆತೃತ್ವದಲ್ಲಿ ಬಿಜೆಪಿಯ ಎಲ್ಲ ಸಚಿವರುಗಳು ರಾಜೀನಾಮೆ ಸಲ್ಲಿಸಿದ್ದರು. ಅಧಿಕಾರ ಹಸ್ತಾಂತರ ಅಕ್ಟೋಬರ್ 3 ರಂದು ಆಗಬೇಕು ಎಂದು ಪಟ್ಟು ಹಿಡಿದಿರುವ ಭಾರತೀಯ ಜನತಾ ಪಕ್ಷ ಒಪ್ಪಂದದಂತೆ ಕುಮಾರಸ್ವಾಮಿ ನಡೆಯಬೇಕು ಎಂದು ಕೇಳಿಕೊಂಡಿದೆ.

ಅಕ್ಟೋಬರ್ ಐದರಂದು ಜೆಡಿ ಎಸ್‌ನ ರಾಜಕೀಯ ವ್ಯವಹಾರಗಳ ಸಮಿತಿ ಅಧಿಕಾರ ಹಸ್ತಾಂತರಕ್ಕೆ ಕುರಿತಂತೆ ಸಭೆ ಸೇರಲಿದ್ದು, ಇಲ್ಲಿ ತೆಗೆದುಕೊಳ್ಳುವ ನಿರ್ಧಾರ ಅಂತಿಮ ಎಂದು ರಾಷ್ಟ್ರೀಯ ಅಧ್ಯಕ್ಷ ದೇವೆಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಸಚಿವರ ಗೈರು ಹಾಜರಿಯ ಹಿನ್ನಲೆಯಲ್ಲಿ ಜೆಡಿಎಸ್ ರಾಜ್ಯ ಘಟಕ ಗುರುವಾರ ಪಕ್ಷದ ಪದಾದಿಕಾರಿಗಳ ಸಭೆಯನ್ನು ಕರೆದಿದೆ.

ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ತಾನು ಜೆಡಿಎಸ್‌ಗೆ ಹೊರಗಿನಿಂದ ಬೆಂಬಲ ನೀಡುವುದಿಲ್ಲ ಎಂದು ಪುನರುಚ್ಚಿಸಿದ್ದು, ಜೆಡಿಎಸ್- ಬಿಜೆಪಿ ಯಾವ ನಿರ್ಧಾರ ತೆಗೆದುಕೊಳ್ಳಲಿವೆ ಎಂಬುದರ ಆಧಾರದ ಮೇಲೆ ನಾವು ಮುಂದಿನ ಹೆಜ್ಜೆ ಇಡಲಿದ್ದೆವೆ ಎಂದು ಹೆಸರು ಹೇಳಲಿಚ್ಚಿಸಿದ ನಾಯಕರೊಬ್ಬರು ಹೇಳಿದ್ದಾರೆ.
ಮತ್ತಷ್ಟು
ಬಿಜೆಪಿ ಅಡಳಿತ ತೃಪ್ತಿಕರ : ವೆಂಕಯ್ಯ
ಅಧಿಕಾರ ಹಸ್ತಾಂತರ ಉಲ್ಲಂಘನೆ: ಸಭೆ
ಹೈಕಮಾಂಡ್ ತೀರ್ಮಾನ ಅಂತಿಮ : ದೇವೇಗೌಡ
ಕಾಂಗ್ರೆಸ್‌ನ ಕಾದು ನೋಡುವ ತಂತ್ರ
ಅನುದಾನ ರಹಿತ ಶಾಲೆಗೆ ಮಂಜೂರಾತಿ ಇಲ್ಲ
ಕೆಪಿಸಿಸಿ ಪುನಾರಚನೆ ?