ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
ಪ್ರಸಕ್ತ ರಾಜಕೀಯ ವಿದ್ಯಮಾನಗಳು ಕುರಿತು ರಾಜ್ಯಪಾಲರ ಗಮನ ಸೇಳೆಯಲು ಶುಕ್ರವಾರ ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರಾದ ಎಚ್.ಕೆ.ಪಾಟಿಲ್ ಸ್ಬೆರಿದಂತೆ ಹಲವಾರು ಮುಖಂಡರ ನಿಯೋಗ ರಾಜಭವನಕ್ಕೆ ತೆರಳಿ ಬಿಜೆಪಿ ಸಚಿವರ ಗೈರು ಹಾಜರಿಯಲ್ಲಿ ನಡೆದ ಸಚಿವ ಸಂಪುಟ ನಿರ್ಣಯಗಳನ್ನು ಮಾನ್ಯತೆ ನೀಡಬಾರದು ಎಂದು ರಾಜ್ಯಪಾಲರಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ನೂರಾರು ಕೋಟಿ ರೂಪಾಯಗಳ ವೆಚ್ಚವಾಗುವ ಹಲವಾರು ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದು ನಿಯಮಗಳ ಉಲ್ಲಂಘನೆ ಎಂದು ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ರಾಜ್ಯಪಾಲರಿಗೆ ಕಾಂಗ್ರೆಸ್ ಮುಖಂಡರು ವಿವರಿಸಿದ್ದಾರೆ.

ಶನಿವಾರ ಬೆಳಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯೂ ನಡೆಯಲಿದೆ. ಶನಿವಾರ ಕಾಂಗ್ರೆಸ್ ಉಸ್ತುವಾರಿ ಪೃಥ್ವಿರಾಜ್ ಚೌಹಾಣ್ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಪ್ರಮುಖ ಮುಖಂಡರು ಗುರುವಾರ ರಾತ್ರಿ ಸಭೆ ನಡೆಸಿ ಚರ್ಚಿಸಿದರು.
ಮತ್ತಷ್ಟು
ರಾಜಕೀಯ ಬಿಕ್ಕಟ್ಟು : ಜನತೆಯ ಆತಂಕ
ಸಂಪುಟ ಸಭೆಗೆ ಬಿಜೆಪಿ ಸಚಿವರ ಗೈರು
ಬಿಜೆಪಿಗೆ ಹೊಸ ಷರತ್ತು ವಿಧಿಸುವುದಿಲ್ಲ: ದೇವೇಗೌಡ
ತುರ್ತು ಸಚಿವ ಸಂಪುಟ ಸಭೆ ; ಬಹಿಷ್ಕರಿಸಲು ಬಿಜೆಪಿ ನಿರ್ಧಾರ
ಕ ಸಾಪ ನೌಕರರ ಪ್ರತಿಭಟನೆ 8 ನೇ ದಿನಕ್ಕೆ
ಜೆಡಿಎಸ್ ವಿರುದ್ಧವೂ ಉದ್ದನೆಯ ಪಟ್ಟಿ:ಯಡ್ಡಿ