ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅನಿರ್ದಿಷ್ಟ ಚಳವಳಿ: ರಾಜ್ಯ ಬಿಜೆಪಿ ಒತ್ತಡ ತಂತ್ರ
ಸಾಕಷ್ಟು ಶಾಸಕಬಲವಿದ್ದರೂ, ರಾಷ್ಟ್ರಪತಿ ಆಳ್ವಿಕೆ ಕೊನೆಗೊಳಿಸಿ ಸರಕಾರ ರಚನೆಗೆ ಅವಕಾಶ ನೀಡಲು ವಿಳಂಬ ಮಾಡುತ್ತಿರುವ ರಾಜ್ಯಪಾಲರ ಮೇಲೆ ಮತ್ತಷ್ಟು ಒತ್ತಡ ಹೇರಲು ರಾಜ್ಯ ಬಿಜೆಪಿ ನಿರ್ಧರಿಸಿದೆ.

ಬಹುಮತದ ಬೆಂಬಲವಿರುವ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್.ಯಡ್ಯೂರಪ್ಪ ಅವರನ್ನು ರಾಜ್ಯಪಾಲರು ಸರಕಾರ ರಚಿಸುವಂತೆ ಆಹ್ವಾನ ನೀಡುವವರೆಗೂ ಅನಿರ್ದಿಷ್ಟ ಮುಷ್ಕರ ನಡೆಸಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ವಕ್ತಾರ ರವಿಶಂಕರ್ ಅವರು, ಪಕ್ಕದ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಉಂಟಾಗುವ ಧನಾತ್ಮಕ ಪರಿಣಾಮವನ್ನು ತಡೆಯಲು ಕೇಂದ್ರ ಮತ್ತು ಯುಪಿಎ ಮಿತ್ರಪಕ್ಷಗಳು, ದಕ್ಷಿಣದ ಮೊದಲ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ತಡೆ ಒಡ್ಡುತ್ತಿವೆ ಎಂದು ಆರೋಪಿಸಿದ್ದಾರೆ.
ಮತ್ತಷ್ಟು
ಸರ್ಕಾರ ರಚನೆ:ಮುಂದುವರಿದ ನಿಗೂಢತೆ
ಗೌಡರ ಷರತ್ತುಗಳ ಅಡಕತ್ತರಿಯಲ್ಲಿ ಬಿಜೆಪಿ
ರಾಜ್ಯಪಾಲರ ಅಂತಿಮ ವರದಿಯಲ್ಲೇನಿರಬಹುದು?
ಹಿಂದಿನ ಒಪ್ಪಂದದಂತೆ ಮೈತ್ರಿ ಸರಕಾರ: ಡಿವಿ ಆಶಯ
ಸರಕಾರ ರಚನೆಗೆ ಅವಕಾಶ ನೀಡಲಿರುವ ಕೇಂದ್ರ?
ಕಾಂಗ್ರೆಸ್ ಸೇರಲ್ಲ:ಎಂ.ಪಿ.ಪ್ರಕಾಶ್