ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯ ರಾಜಕಾರಣ: ಕೇಂದ್ರ ನಿರ್ಧಾರ ಇಂದು
ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿ ಇಂದು ಕೇಂದ್ರದಲ್ಲಿ ಮಹತ್ವದ ವಿದ್ಯಮಾನಗಳು ನಡೆಯಲಿವೆ. ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಇಂದು ಸಂಜೆ ರಾಷ್ಟ್ರಪತಿ ಭವನದ ಎದುರು ಬಲ ಪ್ರದರ್ಶನಕ್ಕಾಗಿ ಪೆರೇಡ್ ನಡೆಸಲಿದ್ದಾರೆ.

ಇನ್ನೊಂದೆಡೆ ರಾಜ್ಯಪಾಲ ರಾಮೇಶ್ವರ ಠಾಕೂರ್ ರಾಜ್ಯ ರಾಜಕೀಯ ಬೆಳವಣಿಗೆಗಳ ಅಂತಿಮ ವರದಿಯನ್ನು ಕೇಂದ್ರಕ್ಕೆ ಒಪ್ಪಿಸಿದ್ದು, ಅಂತಿಮ ನಿರ್ಧಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಸರಕಾರ ರಚನೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಸಂವಿಧಾನ ತಜ್ಞರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜತೆ ಚರ್ಚಿಸಿದ ಅಂಶಗಳ ಆಧಾರದ ಮೇಲೆ ರಾಜ್ಯಪಾಲರು ವರದಿ ಸಿದ್ಧಪಡಿಸಿದ್ದರು.

ಇಂದು ಕೇಂದ್ರದಲ್ಲಿ ರಾಜ್ಯ ರಾಜಕಾರಣದ ಮುಂದಿನ ಸ್ಪಷ್ಟ ಚಿತ್ರಣ ನಿರ್ಧಾರವಾಗಲಿದೆ. ಆದರೆ ಇಂದು ದೆಹಲಿಯಲ್ಲಿ ನಡೆಯಲಿರುವ ಶಾಸಕರ ಪೆರೇಡ್‌ನಲ್ಲಿ ರೇವಣ್ಣ ಸೇರಿದಂತೆ ಜೆಡಿಎಸ್‌ನ ಕೆಲ ಶಾಸಕರು ಭಾಗವಹಿಸುತ್ತಿಲ್ಲ.
ಮತ್ತಷ್ಟು
ಅವಕಾಶವಾದಿ ರಾಜಕಾರಣದ ವಿರುದ್ದ ಜನಾಂದೋಲನ:ಕಾಂಗ್ರೆಸ್
ಆರ್ಎಸ್ಎಸ್ ಕಾರ್ಯಕಾರಿಣಿ ಮಹತ್ವದ ನಿರ್ಣಯಗಳು
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ
ಕಾಂಗ್ರೆಸ್ ಜನಾಂದೋಲನ: ವಾಹನ ಸಂಚಾರ ಸ್ಥಗಿತ
ವೀಣಾಧರಿ ನೆನಪಿನಂಗಳದಲ್ಲಿ ವೀಣಾ ಆಸ್ಪತ್ರೆ
ಅಧಿಕಾರಕ್ಕೆ ಒತ್ತಾಯಿಸಿ ಶಾಸಕರ ಪೆರೇಡ್