ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯೋತ್ಸವ ಪ್ರಶಸ್ತಿ : ಹಸ್ತಕ್ಷೇಪ
ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿರುವ ಮಹನೀಯರನ್ನು ಸರ್ಕಾರದ ವತಿಯಿಂದ ಗೌರವಿಸಲೆಂದೇ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಸಾಹಿತ್ಯ ಹಾಗೂ ಸಂಸ್ಕ್ಕತಿ ಸೇರಿದಂತೆ ನಾಡಿನ ಜಲ ನೆಲ ರಕ್ಷಣೆ ಹಾಗೂ ರಾಜ್ಯದ ಸರ್ವತೋಮುಖ ವೃದ್ದಿಗೆ ಶ್ರಮಿಸಿದವರನ್ನು ಗುರುತಿಸಿ ಆಯ್ಕೆ ಮಾಡಲು ಸರ್ಕಾರ ಪ್ರತಿ ವರ್ಷ ಒಂದು ಸಮಿತಿಯನ್ನು ರಚಿಸುತ್ತದೆ. ಈ ವರ್ಷದ ಸಮಿತಿಯ ಅಧ್ಯಕ್ಷರು ರಾಷ್ಟ್ತ್ರ ಕವಿ ಡಾ. ಜೆ.ಎಸ್.ಶಿವರುದ್ರಪ್ಪ ಅವರು.

ಸಮಿತಿಯಲ್ಲಿ ಆರು ಜನ ಸದಸ್ಯರಿದ್ದರು. ಸುವರ್ಣ ಕರ್ನಾಟಕವನ್ನು ದೃಷ್ಟಿಯಲ್ಲಿಟ್ಟುಕೊಂಡು 51 ಮಂದಿ ಪಟ್ಟಿ ತಯಾರಾಗಿತ್ತು. ಸಾಮಾಜಿಕ ನ್ಯಾಯವನ್ನು ಪುಷ್ಠೀಕರಿಸಿ ಅದಕ್ಕೆ ಅನುಗುಣವಾಗಿ ಪ್ರದೇಶ, ಜಾತಿ, ಮತ, ಲಿಂಗ ಮತ್ತು ಕ್ಷೇತ್ರಗಳ ಅವಶ್ಯಕತೆಯನ್ನು ಪರಿಗಣಿಸಿ ವಿಜೇತರನ್ನು ಆಯ್ಕೆ ಮಾಡಲಾಯಿತು.

ಪ್ರಶಂಸನೀಯ ನಿಷ್ಪಕ್ಷಪಾತದ ಪ್ರಶಸ್ತಿ ಪಟ್ಟಿಯನ್ನು ಸರ್ಕಾರಕ್ಕೆ ಸಮಿತಿ ಸಲ್ಲಿಸಿತು. ಆದರೆ ಅಧಿಕೃತ ಪಟ್ಟಿ ಪ್ರಕಟವಾದ ಮೇಲೆ ನೋಡಿದರೆ ಅದರಲ್ಲಿ ಭಾರಿ ಬದಲಾವಣೆಗಳಾಗಿತ್ತು. ಇದರಿಂದ ಸಮಿತಿ ಅಧ್ಯಕ್ಷರಿಗೂ ಕಸಿವಿಸಿ ಆಯಿತು.

ಸಮಿತಿ ಆಯ್ಕೆ ಮಾಡಿದ ಪಟ್ಟಿಗೆ 21 ಹೊಸ ಹೆಸರು ಸೇರ್ಪಡೆ ಯಾಗಿತ್ತು. ಯಾವ ಮಾನದಂಡಗಳನ್ನು ಬಳಸಿ ಈ ರೀತಿ ರಾಜ್ಯೌತ್ಸವ ಪ್ರಶಸ್ತಿ ಆಯ್ಕೆ ಪಟ್ಟಿಗೆ ತಮಗೆ ಬೇಕಾದವರನ್ನು ಸೇರ್ಪಡೆಗೊಳಿಸಿದರೊ ಗೊತ್ತಿಲ್ಲ.

ಇನ್ನು ಮುಂದಾದರೂ ಇಂಥ ತಪ್ಪುಗಳನ್ನು ಮಾಡದಿರಲಿ, ನಿಷ್ಪಕ್ಷಪಾತವಾಗಿ ಆಯ್ಕೆ ಸಮಿತಿ ಆಯ್ಕೆ ಮಾಡಿದವರಿಗೆ ಮಾತ್ರ ಪ್ರಶಸ್ತಿ ನೀಡುವಂತಾಗಲಿ ಎಂಬುದು ಸಮಿತಿಯಲ್ಲಿದ್ದ ಒಬ್ಬ ಸದಸ್ಯರ ಒತ್ತಾಯ.
ಮತ್ತಷ್ಟು
ಅಂತಿಮ ವರದಿ ಬಗ್ಗೆ ರಾಜ್ಯಪಾಲರ ಗುಟ್ಟು
ದೆಹಲಿಯಲ್ಲಿ ಬಿರುಸುಗೊಂಡ ಕರ್ನಾಟಕ ರಾಜಕೀಯ
ರಾಜ್ಯಪಾಲರಿಂದ ಪಾಟೀಲ್ ಭೇಟಿ
ರಾಜ್ಯ ರಾಜಕಾರಣ: ಕೇಂದ್ರ ನಿರ್ಧಾರ ಇಂದು
ಅವಕಾಶವಾದಿ ರಾಜಕಾರಣದ ವಿರುದ್ದ ಜನಾಂದೋಲನ:ಕಾಂಗ್ರೆಸ್
ಆರ್ಎಸ್ಎಸ್ ಕಾರ್ಯಕಾರಿಣಿ ಮಹತ್ವದ ನಿರ್ಣಯಗಳು