ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ
ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ ಈ ತಿಂಗಳ 24 ಹಾಗೂ 25ರಂದು ನಡೆಯಲಿದೆ.

ಸಮ್ಮೇಳನ ಅಧ್ಯಕ್ಷೆಯಾಗಿ ಸಾಹಿತಿ ನೀಳಾದೇವಿ ಆಯ್ಕೆಯಾಗಿದ್ದಾರೆ. 1932 ಆಗಸ್ಟ್‌ನಲ್ಲಿ ಜನಿಸಿದ ನೀಳಾದೇವಿ ಅವರು ತಮ್ಮ 9ನೇ ವಯಸ್ಸಿನಿಂದಲೇ ಬರವಣಿಗೆ ಪ್ರಾರಂಭಿಸಿದವರು.

ರೂಪದಾಹ, ಅಲಯ ಆಟ, ಮಾಣಿಕ್ಯ, ಹೆಜ್ಜೆ-ಕಥಾ ಸಂಗ್ರಹಗಳು, ಹೊಸಿಲು, ಮೂಕರಾಗ ಮೊದಲಾದ 25 ಕಾದಂಬರಿಗಳನ್ನು ಅವರು ಬರೆದಿದ್ದಾರೆ. ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು 40 ಕೃತಿಗಳನ್ನು ರಚಿಸಿದ್ದಾರೆ.ಅಮೆರಿಕಾ ಕನ್ನಡ ಸಮ್ಮೇಳನದಲ್ಲಿ ಸನ್ಮಾನಿತರಾಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಹಾಗೂ ಪದ್ಮಭೂಷಣ ಬಿ.ಸರೋಜಾದೇವಿ ಪ್ರಶಸ್ತಿ ಅವರಿಗೆ ಸಂದಿವೆ.

ಈ ತಿಂಗಳ 24ರಂದು ಬೆಳಗ್ಗೆ ಸಮಾರಂಭದ ಆರಂಭಕ್ಕೂ ಮುನ್ನ ಸಮ್ಮೇಳನಾಧ್ಯಕ್ಷೆ ನೀಳಾದೇವಿ ಅವರನ್ನು ಭವ್ಯ ಮೆರವಣಿಗೆ ಮೂಲಕ ರೈತ ಸಭಾಂಗಣದ ಆವರಣದಲ್ಲಿ ಸಜ್ಜಾಗಿರುವ ಸಮ್ಮೇಳನದ ವೇದಿಕೆಗೆ ತರಲಾಗುವುದು.

ಸಮ್ಮೇಳನದ ಉದ್ಘಾಟನೆಯನ್ನು ಬೆಂಗಳೂರಿನ ಮಾಜಿ ಮೇಯರ್ ಜಿ.ನಾರಾಯಣ ನೆರವೇರಿಸಲಿದ್ದಾರೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಎಂ.ಶ್ರೀನಿವಾಸ್ ತಿಳಿಸಿದ್ದಾರೆ.
ಮತ್ತಷ್ಟು
ರಾಜ್ಯೋತ್ಸವ ಪ್ರಶಸ್ತಿ : ಹಸ್ತಕ್ಷೇಪ
ಅಂತಿಮ ವರದಿ ಬಗ್ಗೆ ರಾಜ್ಯಪಾಲರ ಗುಟ್ಟು
ದೆಹಲಿಯಲ್ಲಿ ಬಿರುಸುಗೊಂಡ ಕರ್ನಾಟಕ ರಾಜಕೀಯ
ರಾಜ್ಯಪಾಲರಿಂದ ಪಾಟೀಲ್ ಭೇಟಿ
ರಾಜ್ಯ ರಾಜಕಾರಣ: ಕೇಂದ್ರ ನಿರ್ಧಾರ ಇಂದು
ಅವಕಾಶವಾದಿ ರಾಜಕಾರಣದ ವಿರುದ್ದ ಜನಾಂದೋಲನ:ಕಾಂಗ್ರೆಸ್