ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸ್ಥಿರ ಸರಕಾರ ಅಸಾಧ್ಯ:ರಾಜ್ಯಪಾಲರ ವರದಿ
ರಾಜ್ಯದಲ್ಲಿ ಪರ್ಯಾಯ ಸರಕಾರ ರಚನೆಗೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬ ವಿಚಾರದಲ್ಲಿ ಸಲ್ಲಿಸಿರುವ ವರದಿಯಲ್ಲಿ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ನಿಖರವಾದ ಮಾತನ್ನ ದಾಖಲಿಸದೆ,ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ.

ಮಂಗಳವಾರ ತಮ್ಮ ವರದಿಯೊಂದಿಗೆ ದಿಲ್ಲಿಗೆ ತೆರಳಿದ ರಾಜ್ಯಪಾಲರು ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿದ್ದರು.

ಸರಕಾರ ರಚನೆಗೆ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಗೆ ಅವಕಾಶ ನೀಡಬಹುದಾದರೂ,ಎರಡೂ ಪಕ್ಷಗಳು ಕಚ್ಚಾಟ ನಡೆಸಿರುವ ರೀತಿ ನೋಡಿದರೆ ಸ್ಥಿರ ಸರಕಾರ ನೀಡುವ ನಂಬಿಕೆ ಇಲ್ಲ ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬಿಜೆಪಿ-ಜೆಡಿಎಸ್ ಕಳೆದ ಒಂದು ತಿಂಗಳಿನಿಂದ ನಡೆಸಿರುವ ಪ್ರತಿಯೊಂದು ವಿದ್ಯಮಾನಗಳನ್ನ ರಾಜ್ಯಪಾಲರು ತಮ್ಮ ವರದಿಯಲ್ಲಿ ವಿವರವಾಗಿ ಬಿಡಿಸಿಟ್ಟಿದ್ದಾರೆ.ಕೇಂದ್ರ ಸರಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ವರದಿಯಲ್ಲಿ ಬಿಂಬಿಸಿದ್ದಾರೆ.

ಎರಡೂ ಪಕ್ಷಗಳೂ ಕಚ್ಚಾಟ ಮುಂದುವರಿಸಿರುವುದರಿಂದ ಸ್ಥಿರ ಸರಕಾರ ನೀಡಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಹೇಳಿದ್ದಾರೆ.
ಮತ್ತಷ್ಟು
ದೆಹಲಿಗೆ ಶಾಸಕರು: ಗೌಡರ ಅಸಮಾಧಾನ ?
ಸಾವಿರ ಕೋಟಿಗೂ ಅಧಿಕ ವಿದ್ಯುತ್ ಶುಲ್ಕ ಬಾಕಿ
ಮತ್ತೆ ನಕ್ಸಲರ ಕರಪತ್ರಗಳು
ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ
ರಾಜ್ಯೋತ್ಸವ ಪ್ರಶಸ್ತಿ : ಹಸ್ತಕ್ಷೇಪ
ಅಂತಿಮ ವರದಿ ಬಗ್ಗೆ ರಾಜ್ಯಪಾಲರ ಗುಟ್ಟು