ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯ ರೈತ ಸಂಘಕ್ಕೆ 25 ವರ್ಷ
ಇಂದಿಗೆ ಸರಿಯಾಗಿ 25 ವರ್ಷದ ಹಿಂದೆ ಒಂದು ಕಹಿ ಘಟನೆಯಿಂದಾಗಿ ರೂಪುಗೊಂಡ ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಇಂದಿಗೆ 25 ವರ್ಷ.

ಮಂಡ್ಯದ ರೈತರ ಸಮುದಾಯದ ಹಕ್ಕುಗಳಿಗಾಗಿ ನಡೆಸಿದ ಹೋರಾಟದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಮದ್ದೂರು ತಾಲೂಕಿನ ಗೆಜ್ಜಲಗೆರೆ ಹುತಾತ್ಮ ರೈತರಿಬ್ಬರ 25ನೇ ವರ್ಷದ ಪುಣ್ಯಸ್ಮರಣೆ ಹಾಗೂ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮಂಡ್ಯ ರೈತರು ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ಸಿಗಬೇಕು ಮತ್ತು ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳ ಕಬ್ಬಿನ ಖರೀದಿ ಬೆಲೆ ಒಂದೇ ಆಗಿರಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು 1982ರ ನವೆಂಬರ್ 24ರಂದು ಹಮ್ಮಿಕೊಂಡಿದ್ದ ರೈತರ ಚಳವಳಿ ಉಗ್ರ ಸ್ವರೂಪಕ್ಕೆ ತಿರುಗಿದ್ದೇ ಪೊಲೀಸರ ಗೋಲಿಬಾರ್‌ಗೆ ಕಾರಣವಾಗಿತ್ತು.

ಅಂದು ಯಾವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರೈತರು ಹೋರಾಟ ನಡೆಸಿದರೋ ಅವೇ ಸಮಸ್ಯೆಗಳು ಇಂದಿಗೂ ರೈತರನ್ನು ಕಾಡುತ್ತಿವೆ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಏಕರೂಪ ಮಾರುಕಟ್ಟೆ, ಹೊಸ ಕೃಷಿ ನೀತಿಯಂತಹ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ರೈತರ ಬದುಕನ್ನು ಹಸನು ಮಾಡುವ ಪ್ರಯತ್ನವನ್ನು ಸರ್ಕಾರ ಈಗಲಾದರೂ ಮಾಡುವಂಥ ತುರ್ತು ಅಗತ್ಯವಿದೆ.
ಮತ್ತಷ್ಟು
ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
ಇಮೇಜ್ ಸರಿಪಡಿಸಲು ಜೆಡಿಎಸ್ ಸಭೆ ನ. 29ಕ್ಕೆ
ಉತ್ತರ ಪ್ರದೇಶದಲ್ಲಿ ಸ್ಫೋಟ: ರಾಜ್ಯದಲ್ಲಿ ನಿಗಾ
ಮಂಗಳೂರಿಂದ ಬೆಂಗಳೂರಿಗೆ 12 ಗಂಟೆ ರೈಲು ಯಾನ!
ಬೇಡ ಎನ್ನುವ ಕಾಂಗ್ರೆಸ್ಸಿನ ಹಿಂದೆ ದಳ
ಜೆಡಿಎಸ್‌ನಲ್ಲಿ ಒಡಕಿನ ದನಿ