ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸುಪ್ರೀಂಕೋರ್ಟ್‌ಗೆ ಅಪಘಾತ ಪರಿಹಾರ ಅಕ್ರಮ ಪ್ರಕರಣ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಅಪಘಾತ ಪರಿಹಾರ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ.

ಅಪಘಾತ ಪರಿಹಾರ ಅಕ್ರಮ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಇಬ್ಬರು ವೈದ್ಯರು, ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಇಬ್ಬರು ವಕೀಲರ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಲು ರಾಜ್ಯ ಸಾರಿಗೆ ಸಂಸ್ಥೆ ಸಜ್ಜಾಗುತ್ತಿದೆ. ಸದ್ಯದಲ್ಲೇ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದೆಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಅಪಘಾತ ಪರಿಹಾರ ಅಕ್ರಮಗಳ ಕುರಿತಂತೆ ತಮ್ಮ ವಿರುದ್ಧ ಹೂಡಿರುವ ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸಬೇಕೆಂದು ಕೋರಿ ಹಿರಿಯ ವೈದ್ಯ ಅಧೀಕ್ಷಕಿ ಡಾ. ಸಿ.ಎಸ್. ನಾಗಲಕ್ಷ್ಮಿ, ಡಾ. ತುಳಸೀರಾಮ್, ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್ಪೆಕ್ಟರ್ ರತ್ನಾಕರ ಶೆಟ್ಟಿ, ವಕೀಲರಾದ ಶಿವಕುಮಾರ್, ಜಿ. ಮಹಾಂತೇಶ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದ ಹೈಕೋರ್ಟ್ ಕ್ರಿಮಿನಲ್ ವಿಚಾರಣೆ ರದ್ದುಗೊಳಿಸಿತ್ತು.

ಕೆಎಸ್ಆರ್ಟಿಸಿ ಬಸ್‌ಗಳಿಂದ ಅಪಘಾತಕ್ಕೆ ಒಳಗಾಗಿ ಸಣ್ಣಪುಟ್ಟ ಗಾಯಗಳಾಗಿದ್ದರೂ ತೀವ್ರಸ್ವರೂಪದ ಗಾಯಗಳಾಗಿವೆ ಎಂದು ವಾಹನ ಅಪಾಘಾತ ಪರಿಹಾರ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದು ಕೆಲವರು ಸಂಸ್ಥೆಗೆ ವಂಚನೆ ಮಾಡುತ್ತಿರುವ ಕೃತ್ಯ ಬೆಳಕಿಗೆ ಬಂದಿತ್ತು. ಇದರಲ್ಲಿ ವೈದ್ಯರು, ವಕೀಲರು ಮತ್ತು ಪೊಲೀಸರು ಶಾಮೀಲಾಗಿರುವುದು ಪತ್ತೆಯಾಗಿ ಅವರ ವಿರುದ್ಧ ಕೇಸು ದಾಖಲಿಸಲಾಗಿತ್ತು.
ಮತ್ತಷ್ಟು
ರಾಜ್ಯ ರೈತ ಸಂಘಕ್ಕೆ 25 ವರ್ಷ
ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
ಇಮೇಜ್ ಸರಿಪಡಿಸಲು ಜೆಡಿಎಸ್ ಸಭೆ ನ. 29ಕ್ಕೆ
ಉತ್ತರ ಪ್ರದೇಶದಲ್ಲಿ ಸ್ಫೋಟ: ರಾಜ್ಯದಲ್ಲಿ ನಿಗಾ
ಮಂಗಳೂರಿಂದ ಬೆಂಗಳೂರಿಗೆ 12 ಗಂಟೆ ರೈಲು ಯಾನ!
ಬೇಡ ಎನ್ನುವ ಕಾಂಗ್ರೆಸ್ಸಿನ ಹಿಂದೆ ದಳ