ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅರಣ್ಯ ಒತ್ತುವರಿ ಪತ್ತೆಗೆ ಉಪಗ್ರಹ ತಂತ್ರಜ್ಞಾನ ಬಳಕೆ
ರಾಜ್ಯದ ಜ್ವಲಂತ ಸಮಸ್ಯೆಯಾಗಿರುವ ಅರಣ್ಯ ಒತ್ತುವರಿಯನ್ನು ನಿಖರವಾಗಿ ಪತ್ತೆ ಹಚ್ಚಲು ಉಪಗ್ರಹ ತಂತ್ರಜ್ಞಾನ ಬಳಸಿಕೊಳ್ಳುವ ಬಗ್ಗೆ ರಾಜ್ಯ ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಮೂಲಕ ಸಮಗ್ರ ದತ್ತಾಂಶಗಳನ್ನು ಒದಗಿಸುತ್ತಿರುವ ನೈಸರ್ಗಿಕ ಸಂಪನ್ಮೂಲ ದತ್ತಾಂಶ ನಿರ್ವಹಣಾ ಸಂಸ್ಥೆ (ನ್ಯಾಷನಲ್ ರಿಸೋರ್ಸ್ ಡಾಟಾ ಮ್ಯಾನೇಜ್ಮೆಂಟ್ ಸಿಸ್ಟಮ್-ಎನ್ಆರ್ಡಿಎಂಎಸ್) ಅರಣ್ಯ ಇಲಾಖೆಯ ಕೋರಿಕೆಗೆ ನಕಾರಾತ್ಮಕವಾಗಿ ಸ್ಪಂದಿಸಿದೆ. ಉಪಗ್ರಹ ತಂತ್ರಜ್ಞಾನ ಬಳಕೆ ಮಾಡಿ ಅರಣ್ಯ ಒತ್ತುವರಿ ಪತ್ತೆ ಹಚ್ಚುವ ಕಾರ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಹಾಗೂ ಮಾನವ ಸಂಪನ್ಮೂಲದ ಅಗತ್ಯವಿದೆ.

ಸರ್ಕಾರ ವೆಚ್ಚ ಭರಿಸಲು ಒಪ್ಪಿದರೆ ಒತ್ತುವರಿ ಪತ್ತೆ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಎನ್ಆರ್‌ಡಿಎಂಎಸ್ ಈಗ ಪ್ರತಿ ಹಳ್ಳಿಯ ಸಮಗ್ರ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದೆ. ಆ ನಿಟ್ಟಿನಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದೆ.

ಅರಣ್ಯ ಒತ್ತುವರಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ 1978ರಿಂದೀಚಿಗೆ ಸಾಗುವಳಿ ಮಾಡುತ್ತಿರುವ ಪ್ರದೇಶವನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಿದೆ. ಆದರೆ, 1978ಕ್ಕೂ ಮುನ್ನ ಸಾಗುವಳಿ ಮಾಡುತ್ತಿರುವುದಾಗಿ ಒತ್ತುವರಿದಾರರು ವಾದಿಸುತ್ತಲೇ ಬಂದಿದ್ದಾರೆ.

ಈ ಬಗ್ಗೆ ಕಂದಾಯ ಇಲಾಖೆ ಬಳಿಯಾಗಲಿ ಅರಣ್ಯ ಇಲಾಖೆ ಬಳಿಯಾಗಲಿ ನಿಖರ ದಾಖಲೆಗಳಿಲ್ಲ. 1975ರಿಂದ 1980ರವರೆಗೆ ಉಪಗ್ರಹದಲ್ಲಿ ಸೆರೆ ಹಿಡಿಯಲಾಗಿರುವ ಚಿತ್ರಗಳನ್ನು ಅವಲೋಕಿಸಿದರೆ, 1978ರಲ್ಲಿ ಅರಣ್ಯ ಇದ್ದ ಪ್ರದೇಶ ಹಾಗೂ ಸಾಗುವಳಿ ಮಾಡುತ್ತಿದ್ದ ಪ್ರದೇಶದ ಸ್ಪಷ್ಟ ಚಿತ್ರಣ ದೊರೆಯುತ್ತದೆ.
ಮತ್ತಷ್ಟು
ಸಿಇಟಿ ಸೆಲ್ ಹೊಸರೂಪ ಕೆಇಟಿ
ಸುಪ್ರೀಂಕೋರ್ಟ್‌ಗೆ ಅಪಘಾತ ಪರಿಹಾರ ಅಕ್ರಮ ಪ್ರಕರಣ
ರಾಜ್ಯ ರೈತ ಸಂಘಕ್ಕೆ 25 ವರ್ಷ
ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
ಇಮೇಜ್ ಸರಿಪಡಿಸಲು ಜೆಡಿಎಸ್ ಸಭೆ ನ. 29ಕ್ಕೆ
ಉತ್ತರ ಪ್ರದೇಶದಲ್ಲಿ ಸ್ಫೋಟ: ರಾಜ್ಯದಲ್ಲಿ ನಿಗಾ