ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅನರ್ಹತೆ ಅರ್ಜಿ: ಡಿ.1ಕ್ಕೆ ವಿಚಾರಣೆ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ 39 ಶಾಸಕರ ಅನರ್ಹತೆಯ ಮೊಕದ್ದಮೆಯ ವಿಚಾರಣೆ ಡಿಸೆಂಬರ್ 1ಕ್ಕೆ ಮುಂದೂಡಲ್ಪಟ್ಟಿದೆ.

ಸ್ಪೀಕರ್ ಕೃಷ್ಣ ಅವರು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಶನಿವಾರ ನಡೆಯಬೇಕಾಗಿದ್ದ ವಿಚಾರಣೆಯನ್ನು ಮುಂದೂಡಿರುವುದಾಗಿ ತಿಳಿದು ಬಂದಿದೆ.

ಅರ್ಜಿದಾರರಾದ ವಾಟಾಳ್ ನಾಗರಾಜ್, ರಾಜೇಂದ್ರನ್ ಅವರು ಶನಿವಾರ ವಿಚಾರಣೆಗೆ ಹಾಜರಾದಾಗ ಸ್ಪೀಕರ್ ಅವರು ಅನಾರೋಗ್ಯದಿಂದ ಬಂದಿಲ್ಲ ಎಂಬುದಾಗಿ ಸ್ಪೀಕರ್ ಕಚೇರಿಯ ಸಿಬಂದಿಗಳು ವಿಷಯ ತಿಳಿಸಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಪ್ರತಿವಾದಿಗಳ ಪರ ವಕೀಲರು ಸಹ ಈ ಸಂದರ್ಭದಲ್ಲಿ ಹಾಜರಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ವಾಟಾಳ್ ಅವರು, ನಾವು ಹೈಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಇಲ್ಲಿ ಬಹಳ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಕುಮಾರಸ್ವಾಮಿ ಹಾಗೂ ಇತರರಿಗೆ ಈ ವಿಧಾನಸಭೆ ಮಾತ್ರವಲ್ಲ ಶಾಶ್ವತವಾಗಿ ನಿಷೇಧ ಹೇರಬೇಕು ಎಂದು ಹೇಳಿದರು.
ಮತ್ತಷ್ಟು
ಅರಣ್ಯ ಒತ್ತುವರಿ ಪತ್ತೆಗೆ ಉಪಗ್ರಹ ತಂತ್ರಜ್ಞಾನ ಬಳಕೆ
ಸಿಇಟಿ ಸೆಲ್ ಹೊಸರೂಪ ಕೆಇಟಿ
ಸುಪ್ರೀಂಕೋರ್ಟ್‌ಗೆ ಅಪಘಾತ ಪರಿಹಾರ ಅಕ್ರಮ ಪ್ರಕರಣ
ರಾಜ್ಯ ರೈತ ಸಂಘಕ್ಕೆ 25 ವರ್ಷ
ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
ಇಮೇಜ್ ಸರಿಪಡಿಸಲು ಜೆಡಿಎಸ್ ಸಭೆ ನ. 29ಕ್ಕೆ