ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನವರಾತ್ರಿ ವೇಳೆಗೆ ವಿಶ್ವ ಮಾಧ್ವ ಮಠ: ಪುತ್ತಿಗೆ ಶ್ರೀ
ನಮ್ಮ ಆಧ್ಯಾತ್ಮಿಕ ಸಂಪತ್ತು ಜಾಗತಿಕ ಮಟ್ಟವನ್ನು ತಲುಪಬೇಕಿದೆ. ಇದಕ್ಕಾಗಿ ವಿಶ್ವ ಮಾಧ್ವ ಮಠ ಸ್ಥಾಪಿಸುವ ನಿರ್ಧಾರಕ್ಕೆ ತಾವು ಬದ್ಧರಾಗಿದ್ದು, ಮುಂಬರುವ ನವರಾತ್ರಿಯೊಳಗೆ ಇದು ಅಸ್ತಿತ್ವಕ್ಕೆ ಬರಲಿದೆ ಉಡುಪಿಯ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಘೋಷಿಸಿದ್ದಾರೆ.

ಆಧ್ಯಾತ್ಮಿಕ ಸಂಪತ್ತು ಕೇವಲ ನಮ್ಮ ದೇಶಕ್ಕೆ ಸೀಮಿತವಾಗಬಾರದು, ಜಾಗತಿಕ ಮಟ್ಟವನ್ನು ತಲುಪಬೇಕು. ಆದರೆ ಈಗಿರುವ ಧಾರ್ಮಿಕ ಕಟ್ಟಳೆಗಳು ಇದಕ್ಕೆ ಪೂರಕ ವಾತಾವರಣ ನಿರ್ಮಿಸಿ ಕೊಡುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಅನೇಕ ಸ್ವರೂಪದ ಚರ್ಚೆಗೆ ಒಳಗಾಗುತ್ತಿವೆ. ಈ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಸರ್ವಜ್ಞ ಪೀಠಾರೋಹಣದ ನಂತರ ದರ್ಬಾರ್ ಹಾಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ನುಡಿದರು.

ಈ ವಿಶ್ವ ಮಾಧ್ವ ಮಠವು ಉಭಯ ಪೀಠವನ್ನೊಳಗೊಳ್ಳಲಿದ್ದು ತಾವೇ ಅದರ ಪೀಠಾಧಿಪತಿಗಳಾಗಿ ಕಾರ್ಯ ನಿರ್ವಹಿಸಲಿದ್ದೇವೆ. ಸಾಂಪ್ರದಾಯಿಕ ಕಟ್ಟಳೆಗಳಿಗೆ ಸಂಬಂಧಿಸಿದಂತೆ ಪುತ್ತಿಗೆ ಮಠವು ಕಾರ್ಯ ನಿರ್ವಹಿಸಿದರೆ, ಜಾಗತಿಕ ಮಟ್ಟದಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತದೆ. ಶ್ರೀಕೃಷ್ಣನ ಸಂದೇಶವನ್ನು ವಿಶ್ವದೆಲ್ಲೆಡೆ ಪಸರಿಸುವುದು ತಮ್ಮ ಉದ್ದೇಶ ಎಂದು ಪುತ್ತಿಗೆ ಶ್ರೀಗಳು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ಶುಕ್ರವಾರ ಬೆಳಗ್ಗೆ 2.30ರ ಸುಮಾರಿಗೆ ಆರಂಭಗೊಂಡ ಶ್ರೀಗಳ ವೈಭವ ಪೂರ್ಣ ಮೆರವಣಿಗೆ ಜೋಡುಕಟ್ಟೆಯಿಂದ ಪ್ರಾರಂಭಗೊಂಡು ಉಡುಪಿಯನ್ನು ತಲುಪಿದಾಗ ಸಮಯ 5.30 ಗಂಟೆಯಾಗಿತ್ತು.

ಮೆರವಣಿಗೆಯನ್ನು ಹೆಚ್ಚು ಆಕರ್ಷಣೀಯವನ್ನಾಗಿಸಲು 75 ಕ್ಕೂ ಹೆಚ್ಚಿನ ಸಂಖ್ಯೆಯ ಟ್ಯಾಬ್ಲೋಗಳನ್ನು ವ್ಯವಸ್ಥೆ ಮಾಡಿದ್ದು ವಿಶೇಷವಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು. ಬೆಳಗ್ಗೆ 6ಗಂಟೆಯ ಸುಮಾರಿಗೆ ನಡೆದ ಪೀಠಾರೋಹಣ ಸಮಾರಂಭದಲ್ಲಿ ಚೆಂಡೆ, ಶಂಖ, ತಂಬೂರಿ ಇವುಗಳ ವಾದನ, ವೇದಘೋಷ, ವಾದ್ಯಗೋಷ್ಠಿಗಳ ಅಪೂರ್ವ ಸಮ್ಮಿಲನ ಸಮಾರಂಭಕ್ಕೆ ಕಳೆಕೊಟ್ಟವು
ಮತ್ತಷ್ಟು
7 ಯತಿಗಳ ಗೈರು: ಪರ್ಯಾಯ ಪೀಠವೇರಿದ ಪುತ್ತಿಗೆ ಶ್ರೀ
ಆಡ್ವಾಣಿ ಭೇಟಿಯಿಂದ ಬಿಜೆಪಿ ಚಟುವಟಿಕೆ ಬಿರುಸು
ನಿಧಿಯ ಆಸೆಗಾಗಿ ಮಹಿಳೆಯರಿಬ್ಬರ ಬಲಿ
ನೆಲೆ ಕಂಡುಕೊಳ್ಳದ ಎಂ.ಪಿ.ಪ್ರಕಾಶ್
ಆತಂಕ - ಗೊಂದಲಗಳ ಮಧ್ಯೆಯೇ ಪರ್ಯಾಯಕ್ಕೆ ಸಿದ್ಧತೆ
3 ವರ್ಷದಲ್ಲಿ ನೈಸರ್ಗಿಕ ಅನಿಲ ವಿದ್ಯುತ್ ಕೇಂದ್ರಗಳು