ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಪ್ರದಾಯ ಮುರಿದು ಪೀಠವೇರಿದ ಪುತ್ತಿಗೆ ಶ್ರೀ
ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಏಳು ಮಠಗಳ ವಿರೋಧದ ನಡುವೆಯೂ ಪರ್ಯಾಯ ಪೀಠವೇರಿ, ಧಾರ್ಮಿಕ ಆಚರಣೆ, ಕಟ್ಟುಪಾಡುಗಳಿಗೆ ಸಂಬಂಧಿಸಿ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಬದಲಾವಣೆ ಎಂಬುದು ನಿಸರ್ಗ ಸಹಜ ನಡವಳಿಕೆ ಎಂಬ ಮಾತನ್ನು ನಂಬುವವರಿಗೆ ಹಾಗೂ ಇದು ಎಲ್ಲಾ ಕ್ಷೇತ್ರಗಳಲ್ಲೂ, ಆಚರಣೆಗಳಲ್ಲೂ ಆಗಲೇಬೇಕು ಎಂಬ ನಂಬಿಕೆಗೆ ಈ ಬಾರಿಯ ಐತಿಹಾಸಿಕ ಉಡುಪಿ ಪರ್ಯಾಯ ಸಾಕ್ಷಿಯಾಯಿತು.

ಹಿಂದೂ ಧರ್ಮವು ವಿಶ್ವದೆಲ್ಲೆಡೆ ಪಸರಿಸಬೇಕೆಂದರೆ ಅದು ಸಂಪ್ರದಾಯದ ಬಿಗಿ ಬಂಧನಗಳಿಂದ ಹೊರ ಬಂದಾಗಷ್ಟೇ ಸಾಧ್ಯ ಎಂಬ ಅಭಿಪ್ರಾಯ ಹೊಂದಿರುವ ಅವರು ಉಡುಪಿಯ ಅಷ್ಟಮಠಗಳ ಪೀಠಾಧಿಪತಿಗಳ ವಿರೋಧವನ್ನು ಲೆಕ್ಕಿಸದೆ, ಅವರ ಅನುಪಸ್ಥಿತಿಯಲ್ಲೇ ಪರ್ಯಾಯ ಪೀಠವೇರಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ನಿನ್ನೆಯವರೆಗೂ ಪುತ್ತಿಗೆ ಶ್ರೀಗಳ ಜೊತೆಗಿದ್ದ ಶಿರೂರು ಮಠದ ಸ್ವಾಮೀಜಿಯವರೂ ಕೊನೇ ಘಳಿಗೆಯಲ್ಲಿ ಇತರ ಆರು ಮಠಗಳ ಜತೆ ಸೇರಿಕೊಂಡಾಗ ಪೀಠಾರೋಹಣಕ್ಕೆ ಸಂಬಂಧಿಸಿ ಪುತ್ತಿಗೆ ಶ್ರೀಗಳು ಅಕ್ಷರಶಃ ಏಕಾಂಗಿಯಾಗುಳಿಯಬೇಕಾಗಿ ಬಂತು. 750 ವರ್ಷಗಳ ಇತಿಹಾಸವಿರುವ ಶ್ರೀಕೃಷ್ಣ ಮಠದಲ್ಲಿ ಇದೇ ಮೊದಲ ಬಾರಿಗೆ ಪೇಜಾವರರೂ ಸೇರಿದಂತೆ 7 ಯತಿಗಳ ಅನುಪಸ್ಥಿತಿಯಲ್ಲಿ ಪರ್ಯಾಯ ಮಹೋತ್ಸವ ನಡೆಯುವಂತಾಯಿತು.

ಇಷ್ಟಾದರೂ ವಿಚಲಿತರಾಗದ ಪುತ್ತಿಗೆ ಶ್ರೀಗಳು ಇದೇ ಮೊದಲ ಬಾರಿಗೆ ಸಂಪ್ರದಾಯ ಮುರಿದು ಶ್ರೀಕೃಷ್ಣನನ್ನು ಮುಟ್ಟಿ ಪೂಜೆ ಮಾಡುವಾಗ ಅದಕ್ಕೆ ಸಾಕ್ಷಿಯಾಗಿದ್ದು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಮುಂದಿನ ಬೆಳವಣಿಗೆಗಳ ಬಗ್ಗೆ ಭಕ್ತ ಸಮುದಾಯದಲ್ಲಿ ಹೊಸ ಕುತೂಹಲ ಮೂಡಿದೆ.
ಮತ್ತಷ್ಟು
ನವರಾತ್ರಿ ವೇಳೆಗೆ ವಿಶ್ವ ಮಾಧ್ವ ಮಠ: ಪುತ್ತಿಗೆ ಶ್ರೀ
7 ಯತಿಗಳ ಗೈರು: ಪರ್ಯಾಯ ಪೀಠವೇರಿದ ಪುತ್ತಿಗೆ ಶ್ರೀ
ಆಡ್ವಾಣಿ ಭೇಟಿಯಿಂದ ಬಿಜೆಪಿ ಚಟುವಟಿಕೆ ಬಿರುಸು
ನಿಧಿಯ ಆಸೆಗಾಗಿ ಮಹಿಳೆಯರಿಬ್ಬರ ಬಲಿ
ನೆಲೆ ಕಂಡುಕೊಳ್ಳದ ಎಂ.ಪಿ.ಪ್ರಕಾಶ್
ಆತಂಕ - ಗೊಂದಲಗಳ ಮಧ್ಯೆಯೇ ಪರ್ಯಾಯಕ್ಕೆ ಸಿದ್ಧತೆ