ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಿಲ್ಲರ್ ಕವಳ ಸಿಸಿಬಿ ಪೊಲೀಸರ ಕಸ್ಟಡಿಗೆ
ಸಿಸಿಬಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಇಂದು (ಮಂಗಳವಾರ) ನಗರದ ಕುಖ್ಯಾತ ಕಿಲ್ಲರ್ ಎಂದೇ ಗುರುತಿಸಲಾಗಿರುವ ಕವಳ ಹಾಗೂ ಆತನ ಆರು ಜನ ಸಹಚರರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ರಿವಾಲ್ವರ್, ಮದ್ದುಗುಂಡುಗಳು ಸೇರಿದಂತೆ ಅನೇಕ ಮಾರಕಾಸ್ತ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆ, ಸುಲಿಗೆ, ದರೋಡೆ ಸೇರಿದಂತೆ ಒಟ್ಟು 36 ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

ಈ ಆರೋಪಿಗಳನ್ನು ನ್ಯಾಯಾಂಗ ಎದುರು ಹಾಜರು ಪಡಿಸಲಾಗಿದ್ದು, ಬಳಿಕ ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕವಳ ಎನ್ನುವವನು ರಿವಾಲ್ವರ್‌ಗ ಳನ್ನು ಉತ್ತರ ಪ್ರದೇಶದಿಂದ ತಂದು ಇಲ್ಲಿ ಕೆಲವರಿಗೆ ಮಾರಾಟವನ್ನು ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಈತ ಯಾರಿಗೆಲ್ಲಾ ಖರೀದಿಸಿದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದ್ದಾನೆ.

ರಿಯಲ್ ಎಸ್ಟೇಟ್ ಉದ್ಯಮದಲ್ಲೂ ತನ್ನ ಕೈಚಳಕ ತೋರಿಸಿರುವ ಕವಳ, ಅನೇಕರಿಗೆ ಬೆದರಿಸಿ ವ್ಯವಹಾರ ನಡೆಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಳೆಹಾಕುತ್ತಿದ್ದಾರೆ.
ಮತ್ತಷ್ಟು
ದಲಿತರ ಮತಕ್ಕಾಗಿ ಶ್ರಮಿಸುತ್ತಿರುವ ಕಾಂಗ್ರೆಸ್
ಉಗ್ರರು ಶಸ್ತ್ರಾಸ್ತ್ರ ಪಡೆಯಲು ಅಡ್ಡಿಯಾದ ಕೊಲೆ
ಎಂಪಿಗಳಿಗೆ ಬಿಜೆಪಿ ಟಿಕೆಟ್ ಇಲ್ಲ?
ರಾಮನಗರದಿಂದಲೇ ಸ್ಫರ್ಧಿಸುವೆನೆಂದ ಕುಮಾರ್
ಮಹಿಳಾ ಸಬಲೀಕರಣದಿಂದ ದೇಶದ ಅಭಿವೃದ್ದಿ
ಎಸ್ ಎಸ್ಎಲ್‌ಸಿ ಪರೀಕ್ಷೆ : ನಕಲಿ ಪ್ರಶ್ನೆ ಪತ್ರಿಕೆ ಮಾರಾಟ