ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಖರ್ಗೆ ನೇತೃತ್ವದಲ್ಲೇ ಚುನಾವಣೆ :ಕಾಂಗ್ರೆಸ್ ಇಂಗಿತ
ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿಯೇ ವಿಧಾನಸಭಾ ಚುನಾವಣೆಗಳು ನಡೆಯಲಿವೆ ಎಂದು ರಾಜ್ಯ ಕಾಂಗ್ರೆಸ್ ಮೂಲಗಳು ಹೇಳುವ ಮೂಲಕ ಇದುವರೆವಿಗೂ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿವೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರು ಕರ್ನಾಟಕಕ್ಕೆ ಮರಳಿ ಬಂದಿರುವುದರಿಂದ ಸಹಜವಾಗಿಯೇ ಖರ್ಗೆಯವರ ಸ್ಥಾನಕ್ಕೆ ಸಂಚಕಾರ ಬರಲಿದೆ. ಅಧಿಕಾರದ ಗದ್ದುಗೆಯನ್ನು ಏರುವ ದೃಷ್ಟಿಯಿಂದ ಇದು ಸಹಜವೂ ಆಗಿದೆ ಎಂಬ ಮಾತುಗಳು ಇದುವರೆವಿಗೂ ಕಾಂಗ್ರೆಸ್ ಕಾರಿಡಾರ್‌ನಲ್ಲಿ ತೇಲಿಬರುತ್ತಿತ್ತು.

ಆದರೆ ಈಗಾಗಲೇ ಬಹುಜನ ಸಮಾಜವಾದಿ ಪಕ್ಷ ರಾಜ್ಯದಲ್ಲಿ ಸಾಕಷ್ಟು ಪ್ರಬಲವಾಗಿರುವುದರಿಂದ ಖರ್ಗೆಯವರ ಸ್ಥಾನಕ್ಕೆ ಸಂಚಕಾರ ಬಂದರೆ ಒಂದು ವರ್ಗದವರ ಆಕ್ರೋಶಕ್ಕೆ ತುತ್ತಾಗಬಹುದು ಎಂಬ ಎಚ್ಚರಿಕೆಯ ಸಂದೇಶ ಹೈಕಮಾಂಡ್‌ಗೆ ರವಾನೆಯಾಗಿರುವುದರಿಂದ ಕೊನೆ ಘಳಿಗೆಯಲ್ಲಿ ಯಾವುದೇ ಪ್ರಯೋಗಗಳನ್ನು ಮಾಡುವುದು ಬೇಡ ಎಂದು ಹೈಕಮಾಂಡ್ ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹೆಚ್ಚೂ ಕಡಿಮೆ ನಿಂತ ನೀರಂತಾಗಿದ್ದ ರಾಜ್ಯ ಕಾಂಗ್ರೆಸ್‌ಗೆ ರಾಹುಲ್ ಗಾಂಧಿಯವರ ಇತ್ತೀಚಿನ ರಾಜ್ಯ ಪ್ರವಾಸ ನವಚೈತನ್ಯವನ್ನು ನೀಡಿದೆ. ಎಸ್.ಎಂ.ಕೃಷ್ಣರ ಚರಿಷ್ಮಾವೂ ಪಕ್ಷಕ್ಕೆ ಸಾಕಷ್ಟು ಪ್ರಯೋಜನವನ್ನು ತಂದುಕೊಡಲಿದೆ. ಆದ್ದರಿಂದ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯಲ್ಲಿ ಹೋರಾಡಲು ಹೈಕಮಾಂಡ್‌ನಿಂದ ಸ್ಪಷ್ಟ ಸಂದೇಶ ಬಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಾಜಿ ಸಚಿವ ಎಂ.ಮಹದೇವುರವರು ಪಕ್ಷವನ್ನು ಬಿಡದಂತೆ ಮನವೊಲಿಸಲಾಗುವುದು. ಇಷ್ಟಾಗಿಯೂ ಒಂದು ವೇಳೆ ಪಕ್ಷವನ್ನು ಬಿಟ್ಟರೆ ಅದು ಅವರಿಗೆ ನಷ್ಟವಾಗುತ್ತದೆಯೇ ಹೊರತು ಪಕ್ಷಕ್ಕಲ್ಲ. ಚುನಾವಣಾ ಸಮಯದಲ್ಲಿ ಪಕ್ಷ ಸೇರುವ ಅಥವಾ ಬಿಡುವ ಪ್ರಕ್ರಿಯೆಗಳು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಸಾಗರದಂತಿರುವ ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಅಂತಹ ಆಘಾತವೇನೂ ಆಗಲಾರದು ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ.
ಮತ್ತಷ್ಟು
ಮುಖಂಡರ ಸೇರ್ಪಡೆಯಿಂದ ಪಕ್ಷದ ಬಲವರ್ಧನೆ: ಖರ್ಗೆ
ಅನುಮತಿಯಿಲ್ಲದ ಹೊಗೇನಕಲ್ ಯೋಜನೆ 'ಅಕ್ರಮ'
ಎಪ್ರಿಲ್ 10ರಂದು ಕರ್ನಾಟಕ ಬಂದ್‌ಗೆ ಕರೆ
ಹೈಕಮಾಂಡ್ ಸೂಚಿದರೆ ಚುನಾವಣೆಗೆ ಸ್ಪರ್ಧೆ: ಕೃಷ್ಣ
ವಾಗ್ವಾದ : ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ
ಹೊಗೇನಕಲ್ ವಿವಾದ: ಮುಂದುವರಿದ ಪ್ರತಿಭಟನೆ