ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಾಲಕನ ಅಜಾಗರೂಕತೆ:ಬಿಎಂಟಿಸಿ ಬಸ್ಸಿಗೆ ಮಹಿಳೆ ಬಲಿ
ನಗರದಲ್ಲಿ ಬಿಎಂಟಿಸಿ ಬಸ್ಸಿನ ಆರ್ಭಟ ಮತ್ತೆ ಮುಂದುವರಿದಿದೆ. ಮಂಗಳವಾರ ತಡರಾತ್ರಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಅರುಂಧತಿ(40) ಸ್ಥಳದಲ್ಲೇ ಸಾವನ್ನಪ್ಪಿ, ರಮೆಶ್ ಹಾಗೂ ಮುರಳೀಧರ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಯಲಹಂಕದ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿದ್ದ ಅರುಂಧತಿ ಹಾಗೂ ಮತ್ತಿಬ್ಬರು ಸಂಜೆ ರಾಜಾಜಿನಗರದಲ್ಲಿ ಬಸ್ ಇಳಿದು ನಡೆದುಕೊಂಡು ಹೋಗುತ್ತಿದ್ದ ವೇಳೆ ಎಡಗಡೆಯಿಂದ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಓವರ್‌ಟೇಕ್ ಮಾಡುವ ಚಾಲಕನ ಪ್ರಯತ್ನ ಈ ಘಟನೆಗೆ ಕಾರಣ ಎನ್ನಲಾಗಿದೆ.

ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ ಅರುಂಧತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಉದ್ರಿಕ್ತಗೊಂಡ ಜನ ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದು, ಚಾಲಕ ಪರಾರಿಯಾಗಿದ್ದಾನೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಮಲ್ಲೇಶ್ವರಂ ಪೊಲೀಸರು ನೆರೆದಿದ್ದ ಜನರನ್ನು ಚದುರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅರುಂಧತಿಯವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಮತ್ತಷ್ಟು
ಕರುಣಾ ಪುತ್ರಿಗೆ ವಿಶೇಷ ಭದ್ರತೆ
ಖರ್ಗೆ ನೇತೃತ್ವದಲ್ಲೇ ಚುನಾವಣೆ :ಕಾಂಗ್ರೆಸ್ ಇಂಗಿತ
ಮುಖಂಡರ ಸೇರ್ಪಡೆಯಿಂದ ಪಕ್ಷದ ಬಲವರ್ಧನೆ: ಖರ್ಗೆ
ಅನುಮತಿಯಿಲ್ಲದ ಹೊಗೇನಕಲ್ ಯೋಜನೆ 'ಅಕ್ರಮ'
ಎಪ್ರಿಲ್ 10ರಂದು ಕರ್ನಾಟಕ ಬಂದ್‌ಗೆ ಕರೆ
ಹೈಕಮಾಂಡ್ ಸೂಚಿದರೆ ಚುನಾವಣೆಗೆ ಸ್ಪರ್ಧೆ: ಕೃಷ್ಣ