ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌ಗೆ ಕೈ ಕೊಟ್ಟ ಮಹದೇವ್
ಮಾಜಿ ಸಚಿವ ಎಂ.ಮಹದೇವ್ ಕಾಂಗ್ರೆಸ್ ಪಕ್ಷದಿಂದ ಹೊರಬಂದಿರುವುದಾಗಿ ತಿಳಿಸಿದ್ದಾರೆ. ಕಳೆದ 42 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದು ಪಕ್ಷವನ್ನು ಬೆಳೆಸಿದರೂ ಪಕ್ಷ ನನಗೆ ಯಾವುದೇ ಸ್ಥಾನಮಾನ ನೀಡದೇ ನನ್ನನ್ನು ಕೀಳಾಗಿ ಕಂಡಿದೆ ಎಂದು ಅವರು ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮೊನ್ನೆ ಮೊನ್ನೆಯಷ್ಟೇ ಪಕ್ಷಕ್ಕೆ ಬಂದ ವಲಸಿಗರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಲಾಗಿದೆ. ಆದರೆ ಪಕ್ಷವನ್ನು ಕಟ್ಟಿ ಬೆಳೆಸಿದವರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ. ನನಗಾದ ಅನ್ಯಾಯದ ವಿರುದ್ಧ ಕೆಪಿಸಿಸಿ ಹಾಗೂ ಎಐಸಿಸಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲ್ಲಿಲ್ಲ. ಪಕ್ಷಕ್ಕೆ ವಲಸೆ ಬಂದವರಿಂದಲೇ ಕಾಂಗ್ರೆಸ್‌ಗೆ ಸೋಲುಂಟಾಗುತ್ತದೆ ಎಂದು ಭವಿಷ್ಯ ನುಡಿದರು.

ಈ ಹಿಂದೆ ಕಾಂಗ್ರೆಸ್ ಯುವ ಚೈತನ್ಯ ಸಮಾವೇಶದಲ್ಲಿ ಸಿದ್ಧರಾಮಯ್ಯನವರೊಂದಿಗೆ ನಡೆದ ಜಟಾಪಟಿ ನಂತರ ಮಹದೇವ್ ಪಕ್ಷ ತೊರೆಯಲು ಚಿಂತಿಸಿದ್ದರು. ಇತ್ತೀಚೆಗಷ್ಟೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇವರನ್ನು ಭೇಟಿ ಮಾಡಿ ಪಕ್ಷ ಸೇರುವಂತೆ ಆಹ್ವಾನವಿತ್ತಿದ್ದರು. ಆದರೆ ತಮ್ಮ ನಿರ್ಧಾರವನ್ನು ಏಪ್ರಿಲ್ 2 ರಂದು ಪ್ರಕಟಿಸುವುದಾಗಿ ಮಹದೇವ್ ತಿಳಿಸಿದ್ದರು.

ನಿಮ್ಮ ನೇರ ಪ್ರತಿಸ್ಪರ್ಧಿ ಸಿದ್ಧರಾಮಯ್ಯನವರೇ ಎಂಬ ಪತ್ರಕರ್ತರ ಪ್ರಶ್ನೆಗೆ, ಅವರು ನನ್ನ ಪ್ರತಿಸ್ಪರ್ಧಿ ಅಂತಲ್ಲ; ಯಾವ ಪಕ್ಷ ನನ್ನನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತದೋ ಆ ಪಕ್ಷವನ್ನು ಮತ್ತಷ್ಟು ಬಲಗೊಳಿಸಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸುವುದೇ ನನ್ನ ಮುಂದಿನ ಗುರಿ ಎಂದ ಮಹದೇವ್, ರಾಜ್ಯ ರಾಜಕೀಯಕ್ಕೆ ಮರಳಿದ ಕೃಷ್ಣ ಕೂಡಾ ನನ್ನ ಬಗ್ಗೆ ಯಾವುದೇ ಕಾಳಜಿ ತೋರಿಸಿಲ್ಲ ಎಂದು ಆರೋಪಿಸಿದರು.
ಮತ್ತಷ್ಟು
ಚಾಲಕನ ಅಜಾಗರೂಕತೆ:ಬಿಎಂಟಿಸಿ ಬಸ್ಸಿಗೆ ಮಹಿಳೆ ಬಲಿ
ಕರುಣಾ ಪುತ್ರಿಗೆ ವಿಶೇಷ ಭದ್ರತೆ
ಖರ್ಗೆ ನೇತೃತ್ವದಲ್ಲೇ ಚುನಾವಣೆ :ಕಾಂಗ್ರೆಸ್ ಇಂಗಿತ
ಮುಖಂಡರ ಸೇರ್ಪಡೆಯಿಂದ ಪಕ್ಷದ ಬಲವರ್ಧನೆ: ಖರ್ಗೆ
ಅನುಮತಿಯಿಲ್ಲದ ಹೊಗೇನಕಲ್ ಯೋಜನೆ 'ಅಕ್ರಮ'
ಎಪ್ರಿಲ್ 10ರಂದು ಕರ್ನಾಟಕ ಬಂದ್‌ಗೆ ಕರೆ