ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಕ್ಕೆ ಕಾಲಿಟ್ಟ ಮಾನ್ಸೂನ್: ನಾಲ್ಕು ಸಾವು  Search similar articles
ರಾಜ್ಯವನ್ನು ಇಂದು ಪ್ರವೇಶಿಸಿದ ನೈಋತ್ಯ ಮಾನ್ಸೂನ್‌ಗೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಬುಧವಾರ ಸಂಜೆ ಬಿದ್ದ ಮಳೆಗೆ ನಾಲ್ಕು ಮಂದಿ ಬಲಿಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಬೀದರ್, ಕೊಪ್ಪಳ, ಬಳ್ಳಾರಿಗಳಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿರುವ ಕುರಿತು ವರದಿ ಬಂದಿದೆ.

ಸಿಡಿಲು ಬಡಿದು ಹಾವೇರಿಯಲ್ಲಿ ಇಬ್ಬರು, ಬಳ್ಳಾರಿ ಹಾಗೂ ಬೀದರ್‌ನಲ್ಲಿ ತಲಾ ಒಬ್ಬರು ಅಸುನೀಗಿದ್ದಾರೆ. ಅಲ್ಲದೆ, ಹಾವೇರಿಯಲ್ಲಿ 50 ಕುರಿ ಹಾಗೂ 3 ಎತ್ತುಗಳು ಪ್ರಾಣ ಕಳೆದುಕೊಂಡಿವೆ.

ಅಕಾಲಿಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಿದ್ಯುತ್ ಸರಬರಾಜಿನಲ್ಲಿ ತೀವ್ರ ಅಡಚಣೆ ಉಂಟಾಗಿತ್ತು. ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್‌ನಿಂದಾಗಿ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ, ಹಲವೆಡೆ ಅಕಾಲಿಕ ಮಳೆಗೆ ಮರಗಳು ಧರೆಗುರುಳಿವೆ.

ಈ ಮೊದಲು ಹವಾಮಾನ ಇಲಾಖೆ ಈ ಬಾರಿ ಮಾನ್ಸೂನ್ ಭಾರತದ ಕರಾವಳಿ ಮತ್ತು ಒಳನಾಡನ್ನು ಮೇ 23ರ ನಂತರ ಪ್ರವೇಶಿಸಬಹದು ಎಂದು ಭವಿಷ್ಯ ನುಡಿದಿತ್ತು. ಮುಂದಿನ 2 ದಿನ ಬೆಂಗಳೂರು ಸೇರಿದಂತೆ ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳನ್ನು ಮಾನ್ಸೂನ್ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ.
ಮತ್ತಷ್ಟು
ಶಾಂತಿಯುತ ಮತದಾನ ಶೇ 9.18ರಷ್ಟು ಮತದಾನ
ಅಂತಿಮ ಘಟ್ಟದತ್ತ ರಾಜ್ಯ ವಿಧಾನಸಭಾ ಚುನಾವಣೆ
ಅತಂತ್ರ ಸ್ಥಿತಿ ಸಾಧ್ಯವಿಲ್ಲ: ಸಿದ್ದರಾಮಯ್ಯ
ಕಳ್ಳಭಟ್ಟಿ ದುರಂತಕ್ಕೆ ಕಾಂಗ್ರೆಸ್, ಜೆಡಿಎಸ್ ಕಾರಣ: ಬಿಎಸ್‌ವೈ
ಬಿಐಎಲ್‌ಗೆ ಕೆಂಪೇಗೌಡರ ಹೆಸರು: ಕರವೇ ಬೃಹತ್ ಪ್ರತಿಭಟನೆ
ನೂತನ ವಿಮಾನ ನಿಲ್ದಾಣಕ್ಕೆ ಗುರುವಾರ ಚಾಲನೆ