ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈತರಿಗೆ ಉಚಿತ ವಿದ್ಯುತ್, ಶೇ.3ರ ಬಡ್ಡಿ ಸಾಲ  Search similar articles
PTI
ದಕ್ಷಿಣ ಭಾರತದಲ್ಲಿ ಸ್ವಯಂ ಶಕ್ತಿಯಿಂದ ಗೆದ್ದು ಬಂದ ಖ್ಯಾತಿಗೆ ಒಳಗಾದ ಯುಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತನ್ನ ಚೊಚ್ಚಲ ಬಜೆಟ್ ಮಂಡಿಸಿದ್ದು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ ರೈತರಿಗೆ ಉಚಿತ ವಿದ್ಯುತ್ ಘೋಷಿದೆ.

ವಿತ್ತ ಖಾತೆಯನ್ನೂ ಹೊಂದಿರುವ ಬಿ.ಎಸ್. ಯಡಿಯರೂಪ್ಪ ಇದು ಸತತ ಮೂರನೆ ಬಾರಿಗೆ ಬಜೆಟ್ ಮಂಡಿಸುತ್ತಿದ್ದು ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸಿದ್ದು, ಸಮಾಜದ ಸರ್ವರಿಗೂ ಹಿತವಾಗುವಂತ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.

ಶ್ವೇತ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ಯಡಿಯೂರಪ್ಪ, ರಾಷ್ಟ್ರಕವಿ ಕುವೆಂಪು ಅವರ ಕವನದೊಂದಿಗೆ ಬಜೆಟ್ ಭಾಷಣ ಆರಂಭಿಸಿದರು. 10ಎಚ್‌ಪಿ ಪಂಪ್ ಸೆಟ್ ಹೊಂದಿರುವ ರೈತರಿಗೆ ಉಚಿತ ವಿದ್ಯುತ್ ಘೋಷಿದ ವೇಳೆ ಆಡಳಿತ ಪಕ್ಷದ ಸದಸ್ಯರು ಈ ಘೋಷಣೆಯನ್ನು ಮೇಜು ಕುಟ್ಟಿ ಸ್ವಾಗತಿಸಿದರು.

ಇದಲ್ಲದೆ, ಕೃಷಿ ಹಾಗೂ ಪೂರಕ ವಲಯಗಳಿಗೆ ಶೇ.3ರ ದರದ ಬಡ್ಡಿಯ ಸಾಲ, ಕೃಷಿ, ಶೌಚ ವ್ಯವಸ್ಥೆಗಳು, ಮೂಲಸೌಕರ್ಯಗಳಿಗೆ ಸರಕಾರವು ಗಮನ ಹರಿಸಲಿದೆ ಎಂದರು.

ಉಚಿತ ವಿದ್ಯುತ್‌ಗಾಗಿ 2050 ಕೋಟಿ ರೂಪಾಯಿ ಘೋಷಿದರು. ಇದಲ್ಲದೆ, ಬಿತ್ತನೆ ಬೀಜ ಹಾಗೂ ಇನ್ನಿತರ ಸೌಕರ್ಯಗಳಿಗಗಿ ಕೃಷಿಕರಿಗೆ ತಲಾ ಒಂದು ಸಾವಿರ ರೂಪಾಯಿ ಘೋಷಿಸಿದರು.
ಮತ್ತಷ್ಟು
ಎಲ್ಲರ ಸಲಹೆಯೊಂದಿಗೆ ಬಜೆಟ್ ರೂಪಿಸಿದ್ದೇನೆ: ಸಿಎಂ
ತಾಲೂಕು ಕೇಂದ್ರಗಳಲ್ಲೂ ವಸತಿ ಸಮುಚ್ಚಯ: ಕೃಷ್ಣಯ್ಯಶೆಟ್ಟಿ
ರಸಗೊಬ್ಬರ: ರಾಜ್ಯಪಾಲರಿಗೆ ಸಿಎಂ ಮನವಿ
ಗಣಿ ಮಾಫಿಯಾದಿಂದ ರಾಜ್ಯ ಲೂಟಿ: ಗೌಡ
ಜನತಾ ಪರಿವಾರ ತೇಪೆಗೆ ನಾಡಗೌಡ ಪ್ರಯತ್ನ
ಕೆಪಿಸಿಸಿಗೆ ಹೊಸ ಅಧ್ಯಕ್ಷರಾರು?