ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ತಮಿಳುನಾಡಿಗೆ ನೀರು-ರೈತರಿಗೆ ಅನ್ಯಾಯ: ಉಗ್ರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಮಿಳುನಾಡಿಗೆ ನೀರು-ರೈತರಿಗೆ ಅನ್ಯಾಯ: ಉಗ್ರಪ್ಪ
ಕಾವೇರಿ ಜಲಾಶಯದಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡುವ ಮೂಲಕ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡಲು ಹೊರಟಿದೆ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ವಿ.ಎಸ್. ಉಗ್ರಪ್ಪ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡು ನೀರು ಕೇಳದಿದ್ದರೂ ಸಹ ರಾಜ್ಯ ಸರ್ಕಾರವೇ ನೀರು ಬಿಟ್ಟಿದೆ. ಮುಂದೆ ರಾಜ್ಯದಲ್ಲಿ ಸಾಕಷ್ಟು ಮಳೆ ಬರಬಹುದೆಂಬ ನಿರೀಕ್ಷೆ ಕೂಡ ಇಲ್ಲ. ಈ ಸಂದರ್ಭದಲ್ಲಿ ರೈತರ ಜತೆ ಕಣ್ಣು ಮುಚ್ಚಾಲೆ ಆಡುವುದು ಸರಿಯಲ್ಲ ಎಂದು ಸರ್ಕಾರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ನೀರು ಬಿಡಲಾಗಿತ್ತು. ಆದರೆ ಈಗ ಅಂತಹ ತೀರ್ಪು ಮತ್ತು ಬೇಡಿಕೆ ಇಲ್ಲ. ಈ ನಿಟ್ಟಿನಲ್ಲಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ರೈತರ ಹಿತದೃಷ್ಟಿಯಿಂದ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಇದೇ ವೇಳೆ ಗಣಿಗಾರಿಕೆ ಕುರಿತು ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದ ಅವರು, ರಾಜ್ಯ ಸರ್ಕಾರ ಕೂಡಲೇ ಈ ತೀರ್ಪು ಜಾರಿಗೆ ಮುಂದಾಗಬೇಕೆಂದು ಒತ್ತಾಯಿಸಿದರು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇತ್ತೀಚೆಗೆ ಕೇಂದ್ರಕ್ಕೆ ತೆರಳಿದ ಕಾಂಗ್ರೆಸ್ ನಿಯೋಗಕ್ಕೆ ಕೇಂದ್ರ ಸರ್ಕಾರ ಈ ಬಗ್ಗೆ ಭರವಸೆ ನೀಡಿದೆ ಎಂದು ಅವರು ತಿಳಿಸಿದರು.
ಮತ್ತಷ್ಟು
ಭಯೋತ್ಪಾದನೆಗೆ ಕಾಂಗ್ರೆಸ್ ಕುಮ್ಮುಕ್ಕು:ಡಿವಿಎಸ್
ಮಾರುತಿ-ಲಾರಿ ಡಿಕ್ಕಿ: ಇಬ್ಬರು ಸಾವು
ಶಾಸ್ತ್ರೀಯ ಸ್ಥಾನಮಾನ: ಕರವೇ ಆಕ್ರೋಶ
ದಿನಕರನ್ ಹೈಕೋರ್ಟ್ ನೂತನ ಮುಖ್ಯನ್ಯಾಯಮೂರ್ತಿ
ನೈಸ್ -ಪ್ರತಿರೋಧ ಎದುರಿಸಲು ಸಿದ್ಧ:ಸಿಎಂ
ಗಣಿ-ಹೈಕೋರ್ಟ್ ತೀರ್ಪು ಪರಿಗಣಿಸಿ:ನಾಣಯ್ಯ