ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶಾಸ್ತ್ರೀಯ ಸ್ಥಾನಮಾನ:ರಾಜ್ಯಾದ್ಯಂತ ಪ್ರತಿಭಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಾಸ್ತ್ರೀಯ ಸ್ಥಾನಮಾನ:ರಾಜ್ಯಾದ್ಯಂತ ಪ್ರತಿಭಟನೆ
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವುದಕ್ಕೆ ಅಡ್ಡಗಾಲು ಹಾಕುತ್ತಿರುವ ತಮಿಳುನಾಡಿನ ಧೋರಣೆಯನ್ನು ಖಂಡಿಸಿ ಹಾಗೂ ಶಾಸ್ತ್ರೀಯ ಸ್ಥಾನಮಾನಕ್ಕೆ ಆಗ್ರಹಿಸಿ ಶನಿವಾರ ರಾಜ್ಯದ ವಿವಿಧೆಡೆ ನಾರಾಯಣ ಗೌಡ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಪ್ರತಿಭಟನೆ ನಡೆಸಿದೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡದಿರಲು ತಮಿಳುನಾಡು ಪದೇ,ಪದೇ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿರುವ ಹಿನ್ನೆಲೆಯಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಬೆಳಗಾವಿ, ಮಂಡ್ಯ,ತುಮಕೂರು,ಹೊಸಕೋಟೆ,ಚಿತ್ರದುರ್ಗ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಿದರು.

ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆ ತಡೆ ನಡೆಸಿದರೆ, ತುಮಕೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿಯನ್ನು ತಡೆದು ನಿಲ್ಲಿಸಿ ಪ್ರತಿಭಟಿಸಿದರೆ,ಹೊಸಕೋಟೆ ಬಳಿ ತಮಿಳುನಾಡಿಗೆ ತೆರಳುವ ರೈಲನ್ನು ತಡೆದು ನಿಲ್ಲಿಸಿ ಪ್ರತಿಭಟಿಸಿದರು.

ಈ ಹಿಂದೆ ನಡೆದ ಭಾಷಾತಜ್ಞರ ಸಭೆಯಲ್ಲಿ ಕನ್ನಡ ಮತ್ತು ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ಸಮಿತಿ ಒಪ್ಪಿಗೆ ಸೂಚಿಸಿತ್ತಾದರೂ, ಇದೀಗ ಶುಕ್ರವಾರ ಅಂತಿಮ ಸಭೆ ನಡೆಯುವ ಮುನ್ನವೇ ತಮಿಳುನಾಡಿನ ವಕೀಲೊಬ್ಬರು ಭಾಷಾತಜ್ಞರ ಸಮಿತಿಯ ಅಸ್ತಿತ್ವವನ್ನೇ ಪ್ರಶ್ನಿಸಿ ತಮಿಳುನಾಡು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಪರಿಣಾಮ,ನ್ಯಾಯಾಲಯ ವಿವರಣೆ ನೀಡುವಂತೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ. ಇದರೊಂದಿಗೆ ಕನ್ನಡಕ್ಕೆ ದೊರೆಯಬೇಕಾಗಿದ್ದ ಶಾಸ್ತ್ರೀಯ ಸ್ಥಾನಮಾನಕ್ಕೆ ಕಂಟಕ ಎದುರಾದಂತಾಗಿದೆ.
ಮತ್ತಷ್ಟು
ತಮಿಳುನಾಡಿಗೆ ನೀರು-ರೈತರಿಗೆ ಅನ್ಯಾಯ: ಉಗ್ರಪ್ಪ
ಭಯೋತ್ಪಾದನೆಗೆ ಕಾಂಗ್ರೆಸ್ ಕುಮ್ಮುಕ್ಕು:ಡಿವಿಎಸ್
ಮಾರುತಿ-ಲಾರಿ ಡಿಕ್ಕಿ: ಇಬ್ಬರು ಸಾವು
ಶಾಸ್ತ್ರೀಯ ಸ್ಥಾನಮಾನ: ಕರವೇ ಆಕ್ರೋಶ
ದಿನಕರನ್ ಹೈಕೋರ್ಟ್ ನೂತನ ಮುಖ್ಯನ್ಯಾಯಮೂರ್ತಿ
ನೈಸ್ -ಪ್ರತಿರೋಧ ಎದುರಿಸಲು ಸಿದ್ಧ:ಸಿಎಂ