ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಮರನಾಥ್ ವಿವಾದದ ಬೆಂಕಿಗೆ ಬಿಜೆಪಿ ತುಪ್ಪ:ದೇವೇಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮರನಾಥ್ ವಿವಾದದ ಬೆಂಕಿಗೆ ಬಿಜೆಪಿ ತುಪ್ಪ:ದೇವೇಗೌಡ
NRB
ಅಮರನಾಥ ಮಂದಿರದ ಭೂ ಹಸ್ತಾಂತರ ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ ಮೂಲಕ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದೆ ಎಂದು ಮಾಜಿ ಪ್ರಾಧಾನಿ ಎಚ್.ಡಿ.ದೇವೇಗೌಡ ಕಿಡಿಕಾರಿದ್ದಾರೆ.

ಶನಿವಾರ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದ ದೇವೇಗೌಡರು, ವಿವಾದ ಸೌಹಾರ್ದಯತವಾಗಿ ಬಗೆಹರಿಯುವುದು ಬಿಜೆಪಿಗೆ ಬೇಕಾಗಿಲ್ಲ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಈ ಸಮಯದಲ್ಲಿ ವಿವಾದನ್ನು ಬಳಸಿಕೊಂಡು ದೇಶಾದ್ಯಂತ ಕೋಮು ಭಾವನೆಗಳನ್ನು ಪ್ರಚೋದಿಸುವುದು ಬಿಜೆಪಿಯ ದುರುದ್ದೇಶ. ಕೋಮುದಳ್ಳುರಿಯಲ್ಲಿ ಚಳಿ ಕಾಯಿಸಿಕೊಳ್ಳಲು ಬಿಜೆಪಿ ಹೊಂಚುಹಾಕುತ್ತಿದ್ದು, ಇದು ಅತ್ಯಂತ ನಾಚಿಕೆಗೇಡು ಎಂದು ಕಟಕಿಯಾಡಿದರು.

ಪ್ರತ್ಯೇಕತೆಗೆ ನಾಂದಿ !

ಪತ್ರಿಕಾಗೋಷ್ಠಿಯುದ್ದಕ್ಕೂ ಬಿಜೆಪಿ ವಿರುದ್ಧ ಗುಡುಗಿದ ಗೌಡರು, ಅಮರನಾಥ ಯಾತ್ರಿಗಳಿಗೆ ಮೂಲಸೌಕರ್ಯ, ಅಗತ್ಯ ವಸ್ತುಗಳನ್ನು ಒದಗಿಸುತ್ತಿರುವವರು ಮುಸ್ಲೀಮರೇ. ಅಮರನಾಥ ವಿವಾದವನ್ನು ಬಿಜೆಪಿ ರಾಜಕೀಯ ದಾಳವಾಗಿ ಬಳಕೆ ಮಾಡಿಕೊಳ್ಳುತ್ತಿದೆ.

ಆದರೆ ಈಗ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಅದು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಇದು ಅತ್ಯಂತ ಅಪಾಯಕಾರಿ ನಡೆಯಾಗಿದ್ದು, ಈಗಾಗಲೇ ಭಾರತದಿಂದ ದೂರಸರಿಯುತ್ತಿರುವ ಕಾಶ್ಮೀರ ಜನತೆ ಪ್ರತ್ಯೇಕತೆಯ ವಾದ ಮಂಡಿಸುವ ಅಪಾಯವಿದೆ. ಹೀಗಾದರೆ ದೇಶದ ಸಮಗ್ರತೆಗೆ ಧಕ್ಕೆ ಬರುವುದು ಖಂಡಿತ ಎಂದು ದೇವೇಗೌಡ ಹೇಳಿದರು.

ಮಾತುಕತೆಯೇ ಪರಿಹಾರ

ದೇಶಾದ್ಯಂತ ಕೋಮು ಸಂಘರ್ಷ ಉಂಟುಮಾಡಬಹುದಾದ ಈ ವಿಚಾರವನ್ನು ರಾಜಕೀಯ ಪ್ರಬುದ್ಧತೆಯಿಂದ ಬಗೆಹರಿಸಬೇಕಾಗಿದೆ. ಭೂಮಿ ಹಸ್ತಾಂತರ ಕುರಿತು ಉಂಟಾಗಿರುವ ವಿವಾದಕ್ಕೆ ಮಾತುಕತೆಯೇ ಪರಿಹಾರ ಎಂದು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

ಬಂದ್‌‌ಗೆ ಬೆಂಬಲ ಕೊಡಬೇಡಿ

ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನೀಡಿರುವ ಬಂದ್ ಕರೆಗೆ ಬೆಂಬಲ ನೀಡುವ ಅಗತ್ಯವಿಲ್ಲ. ಬಂದ್‌‌ನಿಂದ ಸಾಮಾನ್ಯ ಜನರ ನಿತ್ಯಜೀವನಕ್ಕೆ ಅಡ್ಡಿಯಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದರು.
ಮತ್ತಷ್ಟು
ಶಾಸ್ತ್ರೀಯ ಸ್ಥಾನಮಾನ:ರಾಜ್ಯಾದ್ಯಂತ ಪ್ರತಿಭಟನೆ
ತಮಿಳುನಾಡಿಗೆ ನೀರು-ರೈತರಿಗೆ ಅನ್ಯಾಯ: ಉಗ್ರಪ್ಪ
ಭಯೋತ್ಪಾದನೆಗೆ ಕಾಂಗ್ರೆಸ್ ಕುಮ್ಮುಕ್ಕು:ಡಿವಿಎಸ್
ಮಾರುತಿ-ಲಾರಿ ಡಿಕ್ಕಿ: ಇಬ್ಬರು ಸಾವು
ಶಾಸ್ತ್ರೀಯ ಸ್ಥಾನಮಾನ: ಕರವೇ ಆಕ್ರೋಶ
ದಿನಕರನ್ ಹೈಕೋರ್ಟ್ ನೂತನ ಮುಖ್ಯನ್ಯಾಯಮೂರ್ತಿ