ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿದ್ಯುತ್:ಸರ್ಕಾರಗಳ ನಿರ್ಲಕ್ಷ್ಯ ಕಾರಣ-ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದ್ಯುತ್:ಸರ್ಕಾರಗಳ ನಿರ್ಲಕ್ಷ್ಯ ಕಾರಣ-ಸಿಎಂ
ಹಿಂದಿನ ಸರ್ಕಾರಗಳು ವಿದ್ಯುತ್ ಉತ್ಪಾದನೆ ಬಗ್ಗೆ ಗಮನ ಹರಿಸದಿರುವುದೇ ಇಂದು ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾಜ್ಯದಲ್ಲಿ ಎದ್ದಿರುವ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ತದಡಿ ಉಷ್ಣ ವಿದ್ಯುತ್ ಉತ್ಪಾದನಾ ಸ್ಥಾವರ ಸ್ಥಾಪನೆಗೆ ಕೆಲ ಪರಿಸರವಾದಿಗಳು ತಡೆವೊಡ್ಡಿದ್ದರೆ, ಇತ್ತ ಅಧಿಕಾರಿಗಳು ಈ ಸ್ಥಳವೇ ಸೂಕ್ತ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರವೇ ಪರಿಸರವಾದಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಲ್ಲದೆ, ಬಳ್ಳಾರಿಯಲ್ಲಿ ವಿದ್ಯುತ್ ಉತ್ಪಾದನೆಯ ಹೊಸ ಘಟಕದಲ್ಲಿ ಇನ್ನೆರಡು ವರ್ಷದಲ್ಲಿ ಹೆಚ್ಚಿನ ಉತ್ಪಾದನೆ ಮಾಡಲಿದ್ದು, 400ರಿಂದ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಈ ಮೂಲಕ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಬಗೆಯಲಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಗಣಿಗಾರಿಕೆಯ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗಣಿಗಾರಿಕೆಯನ್ನು ರಾಷ್ಟ್ರೀಕರಣಗೊಳಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದ್ದು, ರಾಜ್ಯದ ಗಣಿ ಸಂಪತ್ತು ಉಳಿಸಲು ಸರ್ಕಾರ ಪ್ರಯತ್ನಿಸುತ್ತದೆ ಎಂದು ತಿಳಿಸಿದರು.
ಮತ್ತಷ್ಟು
ರಾಜ್ಯದಲ್ಲಿ 1 ಲಕ್ಷ ಟನ್ ರಸಗೊಬ್ಬರ ಅಭಾವ: ರವೀಂದ್ರನಾಥ್
ಹುಸಿ ಬಾಂಬ್ ಭೀತಿ ಹುಟ್ಟಿಸಿದರೆ ಹುಷಾರ್ !
ಕೆಎಸ್ಆರ್‌‌ಟಿಸಿ-ಕಾರು ಡಿಕ್ಕಿ ಮೂವರ ಸಾವು
ನಿಗದಿತ ದಿನದಂದೇ ಬಿಬಿಎಂಪಿ ಚುನಾವಣೆ: ಅಶೋಕ್
ಅಮರನಾಥ್ ವಿವಾದದ ಬೆಂಕಿಗೆ ಬಿಜೆಪಿ ತುಪ್ಪ:ದೇವೇಗೌಡ
ಶಾಸ್ತ್ರೀಯ ಸ್ಥಾನಮಾನ:ರಾಜ್ಯಾದ್ಯಂತ ಪ್ರತಿಭಟನೆ