ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾನೂನಿನ್ವಯ ತಮಿಳುನಾಡಿಗೆ ನೀರು:ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾನೂನಿನ್ವಯ ತಮಿಳುನಾಡಿಗೆ ನೀರು:ಸಿಎಂ
ಕಾನೂನಿನ ಮಿತಿಯೊಳಗೆ ನಿಗದಿಸಲ್ಪಟ್ಟ ಪ್ರಮಾಣದ ನೀರನ್ನು ಕಾವೇರಿ ನದಿ ಪಾತ್ರದಿಂದ ತಮಿಳುನಾಡಿಗೆ ಬಿಡಲೇಬೇಕು. ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

ಹಿಂದಿನ ಯಾವ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿಲ್ಲ. ಕಾನೂನಿನಂತೆ ನೀರನ್ನು ಕಾವೇರಿ ನದಿಯಿಂದ ತಮಿಳುನಾಡಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಪ್ರತಿ ಪಕ್ಷಗಳು ಈ ಬಗ್ಗೆ ಟೀಕೆ ಮಾಡುತ್ತಿವೆ. ಆದರೆ ಅವರ ಸರ್ಕಾರವಿದ್ದಾಗ ಕೂಡಾ ನೀರು ಬಿಡಲಾಗಿತ್ತು ಎಂದರು.

ಇಲ್ಲಿಯವರೆಗೆ ಎಷ್ಟು ಟಿಎಂಸಿ ನೀರು ತಮಿಳುನಾಡಿಗೆ ಹರಿದುಹೋಗಿದೆ ಎಂಬ ಬಗ್ಗೆ ತಮ್ಮ ಬಳಿ ಈಗ ಮಾಹಿತಿ ಇಲ್ಲ. ಆದರೂ ಕಾನೂನಿನ ಪ್ರಕಾರ ನೀರು ಬಿಡಬೇಕಾಗುತ್ತದೆ. ತದಡಿ ಸೇರಿದಂತೆ ಇತರ ಕಡೆಗಳ ವಿದ್ಯುತ್ ಯೋಜನೆಗಳನ್ನು ಪರಿಸರವಾದಿಗಳ ಮನವೊಲಿಸಿ ಮಾಡಲಾಗುತ್ತದೆ ಎಂದರು.
ಮತ್ತಷ್ಟು
ವಿದ್ಯುತ್:ಸರ್ಕಾರಗಳ ನಿರ್ಲಕ್ಷ್ಯ ಕಾರಣ-ಸಿಎಂ
ರಾಜ್ಯದಲ್ಲಿ 1 ಲಕ್ಷ ಟನ್ ರಸಗೊಬ್ಬರ ಅಭಾವ: ರವೀಂದ್ರನಾಥ್
ಹುಸಿ ಬಾಂಬ್ ಭೀತಿ ಹುಟ್ಟಿಸಿದರೆ ಹುಷಾರ್ !
ಕೆಎಸ್ಆರ್‌‌ಟಿಸಿ-ಕಾರು ಡಿಕ್ಕಿ ಮೂವರ ಸಾವು
ನಿಗದಿತ ದಿನದಂದೇ ಬಿಬಿಎಂಪಿ ಚುನಾವಣೆ: ಅಶೋಕ್
ಅಮರನಾಥ್ ವಿವಾದದ ಬೆಂಕಿಗೆ ಬಿಜೆಪಿ ತುಪ್ಪ:ದೇವೇಗೌಡ