ನಗರದಲ್ಲಿ ವೀಕೆಂಡ್ ಮೋಜಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ನಗರದ ಹೊರವಲಯದ ಮಂಚನಬಲೆ ಡ್ಯಾಂ ಸಮೀಪದ ಡಾಬಾವೊಂದರಲ್ಲಿ ಮಾದಕ ವಸ್ತುಗಳೊಂದಿಗೆ ಅನೇಕ ಯುವಕ-ಯುವತಿಯರು ರೇವ್ ಪಾರ್ಟಿ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದುಕೊಂಡ ಪ್ರವೀಣ್ ಕುಮಾರ್ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶನಿವಾರ ತಡ ರಾತ್ರಿ ದಿಢೀರ್ ದಾಳಿ ನಡೆಸಿ,ಬಂಧಿತರನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಪ್ರತಿಷ್ಠಿತ ಐಟಿ ಕಂಪೆನಿಗಳು ಸುಮಾರು 150 ಮಂದಿ ಉದ್ಯೋಗಿಗಳು ಇಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ದಾಳಿನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸುಮಾರು 30 ಮಂದಿಯನ್ನು ಬಂಧಿಸಿದ್ದಾರೆ. ಇವರೆಲ್ಲ ಪಾರ್ಟಿಯಲ್ಲಿ ಗಾಂಜಾ, ಮಾತ್ರೆ ಹಾಗೂ ಮಾದಕ ವಸ್ತುಗಳನ್ನು ಬಳಸುತ್ತಿದ್ದರು.
ಕರವೇ ದಾಳಿಯ ಸಂದರ್ಭದಲ್ಲಿ ಅನೇಕ ಮಂದಿ ಓಡಿ ಹೋಗಿದ್ದಾರೆ. ಈ ರೇವ್ ಪಾರ್ಟಿಗಾಗಿ ದೂರದ ಮಂಗಳೂರು, ಮುಂಬೈ, ಚೆನ್ನೈಯಿಂದಲೂ ಆಗಮಿಸಿದ್ದರು.
|