ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಜೆಪಿ ವಿರುದ್ಧ ಜಿ.ಟಿ.ದೇವೇಗೌಡ ಅಸಮಾಧಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ವಿರುದ್ಧ ಜಿ.ಟಿ.ದೇವೇಗೌಡ ಅಸಮಾಧಾನ
ಆಪರೇಷನ್ ಕಮಲದ ಬಗ್ಗೆ ಪಕ್ಷದಲ್ಲಿ ಎದ್ದಿರುವ ಭಿನ್ನಮತದ ಬೆನ್ನಲ್ಲೆ ಈಗ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲು ಬಿಜೆಪಿಯಲ್ಲಿ ಕೆಲ ವರು ವಿರೋಧ ವ್ಯಕ್ತಪಡಿಸಿದ್ದರಿಂದ ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನು ಪಡೆಯಬೇಕಾಯಿತು ಎಂದು ಮಂಡಳಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ಎಂ.ಎಲ್.ಸಿ ಮಾಡುವುದು ಬೇಡ ಎಂಬ ಬಗ್ಗೆ ಪಕ್ಷದಲ್ಲಿ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಯಾವುದೇ ಸ್ಥಾನ ಅಲಂಕರಿಸಲು ಇಷ್ಟ ಪಡಲಿಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವಂತೆ ಹಲವು ಬಾರಿ ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದೆ. ಆದರೆ ಅವರು ನನ್ನ ಮನವಿಯನ್ನು ಸ್ವೀಕರಿಸಲಿಲ್ಲ. ಈ ಬೆಳವಣಿಗೆಯಿಂದ ಬೇಸತ್ತು ಜೆಡಿಎಸ್‌‌ಗೆ ರಾಜೀನಾಮೆ ನೀಡಿ ಬಂದಿರುವುದಾಗಿ ತಿಳಿಸಿದರು.

ಆದರೆ ಯಾವುದೇ ಅಧಿಕಾರ ಲಾಲಸೆಯಿಂದ ಬಿಜೆಪಿ ಸೇರಿಲ್ಲ. ಯಾವುದೇ ಹುದ್ದೆ ನೀಡದಿದ್ದರೂ ನಾನು ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದೇನೆ. ಅಲ್ಲದೆ, ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಈ ಹುದ್ದೆಯನ್ನು ತಮಗೆ ನೀಡಿದ್ದಾರೆ. ನೀಡಿರುವ ಜವಾಬ್ದಾರಿಯನ್ನು ಪ್ರಮಾಣಿಕತೆಯಿಂದ ನಿರ್ವಹಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಮತ್ತಷ್ಟು
ಉಪಚುನಾವಣೆ-ಸರ್ಕಾರ ಹಣ ಬಿಡುಗಡೆಗೆ ಜೆಡಿಎಸ್ ಆಕ್ಷೇಪ
ಆಪರೇಶನ್ ಹಸ್ತ: ಮೊಯ್ಲಿಗೆ ಸದಾನಂದ ಗೌಡ ಸವಾಲ್
ಬಿಹಾರ ಪ್ರವಾಹ-ರಾಜ್ಯದಿಂದ 10 ಕೋಟಿ ನೆರವು
ಅಕ್ಕ ಸಮ್ಮೇಳನ: ರಾಜ್ಯದ ಅಭಿವೃದ್ಧಿಗೆ ಸಿಎಂ ಕರೆ
'ವರ್ಷಧಾರೆ'ಗೆ 384 ಕೋಟಿ ನಷ್ಟ: ರೆಡ್ಡಿ
ಕೆಪಿಸಿಸಿ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಖರ್ಗೆ