ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಉಪಚುನಾವಣೆ-ತೃತೀಯರಂಗದ ಜತೆ ಮೈತ್ರಿ:ಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಪಚುನಾವಣೆ-ತೃತೀಯರಂಗದ ಜತೆ ಮೈತ್ರಿ:ಗೌಡ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗದೊಂದಿಗೆ ಮೈತ್ರಿ ಕುರಿತು ಮಾತುಕತೆ ನಡೆಸಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಇದೀಗ ಬಿಎಸ್ಪಿ ನಾಯಕಿ ಮಾಯಾವತಿಯವರನ್ನು ಭೇಟಿ ಮಾಡಲಿದ್ದಾರೆ.

ಈ ಸಂಬಂಧ ಸೋಮವಾರ ದೆಹಲಿಗೆ ತೆರಳಿರುವ ದೇವೇಗೌಡರು ಮಾಯಾವತಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಪ್ರಮುಖವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಕುರಿತು ಚರ್ಚೆ ನಡೆಸಲಿದ್ದಾರೆ. ರಾಜ್ಯದ ಏಳು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ರಾಜೀನಾಮೆ ನೀಡಿದ್ದು, ಶೀಘ್ರವೇ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ದೇವೇಗೌಡರ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದೆ.

ಇದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೊತೆ ದೇವೇಗೌಡರು ಮಾಯಾವತಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾಜ್ಯದಲ್ಲಿ ಉಪಚುನಾ ವಣೆಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಬಿಎಸ್ಪಿ ಒಪ್ಪಿಗೆ ಸೂಚಿಸಿತ್ತು.
ಮತ್ತಷ್ಟು
ಬಿಜೆಪಿ ವಿರುದ್ಧ ಜಿ.ಟಿ.ದೇವೇಗೌಡ ಅಸಮಾಧಾನ
ಉಪಚುನಾವಣೆ-ಸರ್ಕಾರ ಹಣ ಬಿಡುಗಡೆಗೆ ಜೆಡಿಎಸ್ ಆಕ್ಷೇಪ
ಆಪರೇಶನ್ ಹಸ್ತ: ಮೊಯ್ಲಿಗೆ ಸದಾನಂದ ಗೌಡ ಸವಾಲ್
ಬಿಹಾರ ಪ್ರವಾಹ-ರಾಜ್ಯದಿಂದ 10 ಕೋಟಿ ನೆರವು
ಅಕ್ಕ ಸಮ್ಮೇಳನ: ರಾಜ್ಯದ ಅಭಿವೃದ್ಧಿಗೆ ಸಿಎಂ ಕರೆ
'ವರ್ಷಧಾರೆ'ಗೆ 384 ಕೋಟಿ ನಷ್ಟ: ರೆಡ್ಡಿ