ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆರ್ಚ್ ಬಿಷಪ್ ವಿರುದ್ಧ ಡೆರಿಕ್ ಕಿಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಚ್ ಬಿಷಪ್ ವಿರುದ್ಧ ಡೆರಿಕ್ ಕಿಡಿ
ಪೋಪ್ ಆರ್ಚ್ ಬಿಷಪ್ ಬರ್ನಾಡ್ ಮೊರೆಸ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಸಭ್ಯವಾಗಿ ನಡೆಸಿಕೊಂಡಿದ್ದಾರೆಂದು ಶಾಸಕ ಡೆರಿಕ್ ಎಂ.ಬಿ. ಪುಲ್ಲಿನ್ ಫಾ ಆರೋಪಿಸಿದ್ದಾರೆ.

ಮತಾಂತರ ಹಿನ್ನೆಲೆಯಲ್ಲಿ ಕೆಲವು ದುಷ್ಕರ್ಮಿಗಳು ನಡೆಸಿದ ದಾಳಿ ಸಂಬಂಧಿಸಿದಂತೆ ಸಾಂತ್ವನ ಹೇಳಲು ತೆರಳಿದ ಮುಖ್ಯಮಂತ್ರಿಗಳನ್ನು ಮನೆ ಮುಂದೆ ನಿಲ್ಲಿಸಿಕೊಂಡು ಬರ್ನಾಡ್ ಅವರು ಅನಾಗರಿಕರಂತೆ ವರ್ತಿಸಿದ್ದಾರೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಈ ಪ್ರಕರಣದ ಕ್ರೈಸ್ತ ಸಮುದಾಯವೇ ತಲೆತಗ್ಗಿಸುವಂತಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಮತಾಂತರ ನಡೆಯುತ್ತಿರುವುದು ನಿಜ. ಇದಕ್ಕೆ ಸಂಬಂಧಿಸಿದಂತೆ ವಿದೇಶದಿಂದ ಕೋಟ್ಯಂತರ ರೂ. ಹಣ ದೊರೆತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ನಡೆದಿರುವ ಗಲಭೆ ಕುರಿತು ತನಿಖೆ ನಡೆಸಲು ಆಗಮಿಸಿರುವ ಕೇಂದ್ರ ತನಿಖಾ ತಂಡ ರಾಜ್ಯದ ವಸ್ತುಸ್ಥಿತಿ ಗಮನಿಸದೆ ಕಾಂಗ್ರೆಸ್ ನಿಲುವಿನಂತೆ ವರ್ತಿಸಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ನ್ಯೂಲೈಫ್ ನಂತಹ ಸಂಘಟನೆಗಳ ನಡೆಸುತ್ತಿರುವ ಮತಾಂತರದ ಕುರಿತು ತಂಡ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದ್ದಾರೆ.
ಮತ್ತಷ್ಟು
ಕೇಂದ್ರ-ರಾಜ್ಯದ ವಿರುದ್ಧ ಜೆಡಿಎಸ್ ಪ್ರತಿಭಟನೆ
ಮಾರುಕಟ್ಟೆ ಬಲಪಡಿಸಲು ಅತ್ಯಾಧುನಿಕ ಕ್ರಮ:ತಂಗಡಗಿ
ಕಲ್ಗುರ್ಗಿಯಲ್ಲಿ ನಾಳೆ ಸಚಿವ ಸಂಪುಟ ಸಭೆ
ದೆಹಲಿ ಸ್ಫೋಟಕ್ಕೆ ಉಡುಪಿಯಿಂದ 10 ಬಾಂಬ್ ‌‌‌!
ಹೆರಾಯಿನ್ ಸಾಗಿಸುತ್ತಿದ್ದ ವಿದ್ಯಾರ್ಥಿನಿ ಬಂಧನ
ದಾಳಿಯಿಂದ ತಲೆ ತಗ್ಗಿಸುವಂತಾಗಿದೆ:ಯಡಿಯೂರಪ್ಪ