ಸಮುದ್ರಶಾಸ್ತ್ರದ ಪ್ರಕಾರ ಕೂದಲು ನೋಡಿ ಮಹಿಳೆಯ ಗುಣ ತಿಳಿಯಬಹುದಂತೆ

ಬೆಂಗಳೂರು, ಬುಧವಾರ, 15 ಮೇ 2019 (06:59 IST)

ಬೆಂಗಳೂರು : ತಲೆಕೂದಲು ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ, ವ್ಯಕ್ತಿತ್ವನ್ನು ಗುರುತಿಸುಲ್ಲಿಯು ಪ್ರಧಾನ ಪಾತ್ರವಹಿಸುತ್ತದೆ. ಸಮುದ್ರಶಾಸ್ತ್ರದ ಪ್ರಕಾರ ಮೂಲ ಕೂದಲ ರಚನೆ ಮತ್ತು ಬಣ್ಣದಿಂದ ಮಹಿಳೆಯ ಸ್ವಭಾವವನ್ನು ಗುರುತಿಸಿಕೊಳ್ಳಬಹುದಂತೆ.ಈ ಶಾಸ್ತ್ರದ ಪ್ರಕಾರ ಯಾರು ಗುಂಗುರು ಕೂದಲು ಹೊಂದಿರುವ ಮಹಿಳೆಯರು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಸದಾ ಅದೃಷ್ಟ ಜೊತೆಗಿರುವುದರಿಂದ ಇವರು ಹೆಚ್ಚು ಸಂತೋಷ ಮತ್ತು ಆನಂದದಿಂದ ಇರುತ್ತಾರೆ. ಕ್ರಿಯಾಶೀಲರಾಗಿರುವ ಇವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವವರಿಗೂ ಹೆಚ್ಚಿನ ಅದೃಷ್ಟ ಖುಲಾಯಿಸುತ್ತದೆ.

 

ಉದ್ದ ಕೂದಲು ಹೊಂದಿರುವವರು ಆಕರ್ಷಕವಾಗಿರುತ್ತಾರೆ. ಇಂತಹ ಕೂದಲಿರುವವರು ಉತ್ತಮ ದೃಷ್ಟಿಕೋನಗಳನ್ನು ಹೊಂದಿರುವವರು ಆಗಿರುತ್ತಾರೆ. ಇವರು ಕನಸಿನ ಲೋಕಕ್ಕಿಂತ ವಾಸ್ತವವನ್ನು ಅಂಗೀಕರಿಸಿ ಹೊಂದಿಕೊಂಡು ಬದುಕಲು ಇಚ್ಛಿಸುತ್ತಾರೆ.

 

ನೇರ ಕೂದಲಿನ (ಸ್ಟ್ರೈಟ್ ಹೇರ್) ಮಹಿಳೆಯರಲ್ಲಿ ಯಾವುದೇ ಕಾರ್ಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುವ ಸಾಮರ್ಥ್ಯವಿರುತ್ತದೆ. ಖರ್ಚು ವೆಚ್ಚವನ್ನು ಸಂಭಾಳಿಸುವ ಸಾಮರ್ಥ್ಯ ಅವರಿಗಿರುತ್ತದೆ.

 

ಗಿಡ್ಡ ಅಥವಾ ಚಿಕ್ಕ ಕೂದಲನ್ನು ಹೊಂದಿರುವವರು ಹೆಚ್ಚು ಶಿಸ್ತು ಪ್ರಿಯರಾಗಿರುತ್ತಾರೆ. ಪ್ರತಿಯೊಂದು ಕೆಲಸಗಳನ್ನು ಶ್ರಮವಹಿಸಿ ಮಾಡುವ ಇವರಲ್ಲಿ ಜನರ ಬಗ್ಗೆ ಗೊಂದಲದ ಅಭಿಪ್ರಾಯಗಳಿರುತ್ತದೆ.

 

ಕಡಿಮೆ ಕೂದಲು ಮತ್ತು ತೆಳುವಾದ ಕೇಶವನ್ನು ಹೊಂದಿರುವ ಮಹಿಳೆಯರಲ್ಲಿ ಆತ್ಮ ವಿಶ್ವಾಸದ ಕೊರೆತೆ ಇರುತ್ತದೆ. ಇವರು ಸದಾ ಶಾಂತಿಯನ್ನು ಬಯಸುತ್ತಾರೆ. ಜೀವನದ ಬಗ್ಗೆ ಯಾವುದೇ ರೀತಿಯ ನಿರೀಕ್ಷೆಗಳನ್ನು ಇವರು ಇಟ್ಟುಕೊಳ್ಳುವುದಿಲ್ಲ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಈ ದೇವಸ್ಥಾನದಲ್ಲಿ ಕುಡಗೋಲನ್ನು ಹರಕೆ ರೂಪದಲ್ಲಿ ಅರ್ಪಿಸುತ್ತಾರಂತೆ. ಯಾಕೆ ಗೊತ್ತಾ?

ಬೆಂಗಳೂರು : ಎಲ್ಲಾ ದೇವಸ್ಥಾನಗಳಲ್ಲಿ ಹೆಚ್ಚಾಗಿ ದೇವರಿಗೆ ಹಣ್ಣು-ಕಾಯಿ, ನೈವೇದ್ಯ, ಕಾಣಿಕೆಗಳನ್ನು ...

news

ಹಣ್ಣಿನ ತೋಟದಲ್ಲಿ ಹೆಚ್ಚಿನ ಫಸಲು ಕಾಣಲು ಶಿವಲಿಂಗಕ್ಕೆ ಇದರಿಂದ ಪೂಜೆ ಮಾಡಿ

ಬೆಂಗಳೂರು : ಶಿವನು ಭಕ್ತರ ಕಷ್ಟಗಳನ್ನು, ಇಷ್ಟಾರ್ಥಗಳನ್ನು ಬಹಳ ಬೇಗ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ...

news

ಪತ್ನಿ ಮಾಡುವ ಈ ಕೆಲಸ ಪತಿಯ ದುರಾದೃಷ್ಟಕ್ಕೆ ಕಾರಣವಾಗುತ್ತದೆಯಂತೆ

ಬೆಂಗಳೂರು : ಮಹಿಳೆ ಮನೆಯನ್ನು ಬೆಳಗುವ ಗೃಹಲಕ್ಷ್ಮೀ ಮಾತ್ರವಲ್ಲ ತನ್ನ ಪತಿಗೆ ಅದೃಷ್ಟವನ್ನು ತಂದುಕೊಡುವ ...

news

ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ತಿರುಪತಿಗೆ ಹೋದಷ್ಟೇ ಪುಣ್ಯ ಲಭಿಸುತ್ತದೆಯಂತೆ.

ಬೆಂಗಳೂರು : ಪ್ರಸಿದ್ಧ ದೇವಾಲಯವಾದ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಜೀವನದಲ್ಲಿ ಒಂದು ಬಾರಿಯಾದರೂ ...