ನೀವು ಹುಟ್ಟಿದ ಸಂಖ್ಯೆಯ ಮೂಲಕ ನೀವು ಯಾವ ದಿಕ್ಕಿನಲ್ಲಿ ಏನನ್ನು ಇಟ್ಟರೆ ಶುಭ ಗೊತ್ತಾ?

ಬೆಂಗಳೂರು| pavithra| Last Modified ಗುರುವಾರ, 4 ಮಾರ್ಚ್ 2021 (07:09 IST)
ಬೆಂಗಳೂರು : ಸಂಖ್ಯಾಶಾಸ್ತ್ರವನ್ನು ಪಾಲಿಸುವುದರ ಮೂಲಕ ಕೂಡ ನಿಮ್ಮ ಜೀವನದಲ್ಲಿ ಅಭಿವೃದ್ಧಿಯನ್ನು ಸಾಧಿಸಬಹುದು. ಹಾಗಾಗಿ ನೀವು ಹುಟ್ಟಿದ ಸಂಖ್ಯೆಯ ಮೂಲಕ ನೀವು ಯಾವ ದಿಕ್ಕಿನಲ್ಲಿ ಏನನ್ನು ಇಡಬೇಕು ಎಂಬುದನ್ನು ತಿಳಿದುಕೊಳ್ಳಿ.

ನೀವು ಹುಟ್ಟಿದ ದಿನಾಂಕವನ್ನು ಕೂಡಿಸುವುದರ ಮೂಲಕ ನಿಮ್ಮ ಮೂಲ ಸಂಖ್ಯೆ ದೊರೆಯುತ್ತದೆ. ಉದಾಹರಣೆಗೆ ನೀವು ಹುಟ್ಟಿದ ದಿನಾಂಕ 29 ಆದರೆ ಮೂಲ ಸಂಖ್ಯೆ 2+9=11.

ಹಾಗಾಗಿ ಮೂಲ ಸಂಖ್ಯೆ 1 ಇರುವವರಿಗೆ ದಿಕ್ಕು ಶುಭವಾಗಿದ್ದು, ಈ ದಿಕ್ಕಿನಲ್ಲಿ ಕೊಳಲನ್ನು ಇಡಿ.
ಮೂಲ ಸಂಖ್ಯೆ 2 ಇರುವವರಿಗೆ ವಾಯುವ್ಯ ದಿಕ್ಕು ಶುಭವಾಗಿದ್ದು, ಈ ದಿಕ್ಕಿನಲ್ಲಿ ಬಿಳಿ ಬಣ್ಣದ ವಸ್ತು ಇಡಿ.
ಮೂಲ ಸಂಖ್ಯೆ 3 ಇರುವವರಿಗೆ ಈಶಾನ್ಯ ದಿಕ್ಕು ಶುಭವಾಗಿದ್ದು, ಈ ದಿಕ್ಕಿನಲ್ಲಿ ರುದ್ರಾಕ್ಷಿಯನ್ನು ಇಡಿ.
ಮೂಲ ಸಂಖ್ಯೆ 4 ಇರುವವರಿಗೆ ನೈರುತ್ಯ ದಿಕ್ಕು ಶುಭವಾಗಿದ್ದು, ಈ ದಿಕ್ಕಿನಲ್ಲಿ ಗಾಜನ್ನು ಇಡಿ.
ಮೂಲ ಸಂಖ್ಯೆ 5 ಇರುವವರಿಗೆ ಉತ್ತರ ದಿಕ್ಕು ಶುಭವಾಗಿದ್ದು, ಈ ದಿಕ್ಕಿನಲ್ಲಿ ಲಕ್ಷ್ಮಿಕುಬೇರರ ವಿಗ್ರಹ ಇಡಿ.
ಮೂಲ ಸಂಖ್ಯೆ 6 ಇರುವವರಿಗೆ ಆಗ್ನೇಯ ದಿಕ್ಕು ಶುಭ, ಈ ದಿಕ್ಕಿನಲ್ಲಿ ನವಿಲುಗರಿ ಇಡಿ.
ಮೂಲ ಸಂಖ್ಯೆ 7 ಇರುವವರಿಗೆ ವಾಯುವ್ಯ ದಿಕ್ಕು ಶುಭವಾಗಿದ್ದು, ಈ ದಿಕ್ಕಿನಲ್ಲಿ ರುದ್ರಾಕ್ಷಿಯನ್ನು ಇಡಿ.
ಮೂಲ ಸಂಖ್ಯೆ 8 ಇರುವವರಿಗೆ ಪಶ್ಚಿಮ ದಿಕ್ಕು ಶುಭವಾಗಿದ್ದು, ಈ ದಿಕ್ಕಿನಲ್ಲಿ ಕಪ್ಪು ಸ್ಫಟಿಕ ಇಡಿ.
ಮೂಲ ಸಂಖ್ಯೆ 9 ಇರುವವರಿಗೆ ದಕ್ಷಿಣ ದಿಕ್ಕು ಶುಭವಾಗಿದ್ದು, ಈ ದಿಕ್ಕಿನಲ್ಲಿ ಪಿರಮಿಡ್ ವಿಗ್ರಹ ಇಡಿಇದರಲ್ಲಿ ಇನ್ನಷ್ಟು ಓದಿ :