ಶಾಸ್ತ್ರದ ಪ್ರಕಾರ ಮಹಿಳೆಯರು ಸ್ಮಶಾನಕ್ಕೆ ಹೋಗಬಾರದು ಯಾಕೆ ಗೊತ್ತಾ?

ಬೆಂಗಳೂರು| pavithra| Last Modified ಶುಕ್ರವಾರ, 19 ಅಕ್ಟೋಬರ್ 2018 (14:29 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ಮನುಷ್ಯ ಸತ್ತ ನಂತರ ಆತನ ಶರೀರವನ್ನು ಸ್ಮಶಾನದಲ್ಲಿ ಸುಡುತ್ತಾರೆ. ಆದರೆ ಆ ವೇಳೆ ಸ್ಮಶಾನಕ್ಕೆ ಮಹಿಳೆಯರು ಹೋಗಬಾರದು ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಇದಕ್ಕೆ 3 ಕಾರಣಗಳಿವೆ.

ಮೊದಲನೇಯದಾಗಿ ಶವವನ್ನು ಮನೆಯಿಂದ ತೆಗೆದುಕೊಂಡು ಹೋದ ನಂತರ ಮನೆಯನ್ನು ಸ್ವಚ್ಛಗೊಳಿಸಿ
ಅಡುಗೆ ಮಾಡಲಾಗುತ್ತದೆ. ಅದಕ್ಕಾಗಿ ಮಹಿಳೆಯರು ಅವಶ್ಯವಾಗಿ ಮನೆಯಲ್ಲಿ ಇರಲೇ ಬೇಕು.


ಎರಡನೇಯದಾಗಿ ಸ್ಮಶಾನದಲ್ಲಿ ಆತ್ಮಗಳು ವಾಸವಾಗಿರುತ್ತವೆ. ಕೆಟ್ಟ ಆತ್ಮಗಳು ಮನುಷ್ಯನ ದೇಹವನ್ನು ಸೇರಲು ನಡೆಸುತ್ತವೆ. ಹಾಗೇ ಮದುವೆಯಾಗದ ಕನ್ಯೆಯನ್ನು ಅತೃಪ್ತ ಆತ್ಮಗಳು ಹೆಚ್ಚಾಗಿ ಸೆಳೆಯುತ್ತವೆ. ಆದಕಾರಣ ಮಹಿಳೆಯರು ಸ್ಮಶಾನಕ್ಕೆ ಹೋಗಬಾರದೆನ್ನುತ್ತಾರೆ.


ಮೂರನೇಯದಾಗಿ ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡವರು ತಮ್ಮ ತಲೆಕೂದಲನ್ನು ತೆಗೆಯಬೇಕು. ಆದರೆ ಮಹಿಳೆಯರು ಕೂದಲನ್ನು ತೆಗೆಯುವಂತಿಲ್ಲ. ಆದಕಾರಣ ಅವರು ಸ್ಮಶಾನಕ್ಕೆ ಹೋಗಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :