ಬೆಂಗಳೂರು: ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಶ್ರಾವಣ ಶುಕ್ರವಾರವಾದ ಇಂದು ಮಹಾಲಕ್ಷ್ಮಿಗೆ ಅಲಂಕರಿಸಿ ಪೂಜೆ ಮಾಡುವುದು ಶ್ರೇಷ್ಠ ಎಂದು ನಂಬಲಾಗುತ್ತದೆ.ಅದರಲ್ಲೂ ವಿಶೇಷವಾಗಿ ದೇವಿಯ ಪೂಜೆಯನ್ನು ಮಹಿಳೆಯರೇ ಮಾಡುವುದು ಈ ಹಬ್ಬದ ವಿಶೇಷ. ಸಾಮಾನ್ಯವಾಗಿ ಲಕ್ಷ್ಮಿ ಎಂದರೆ ನಮಗೆ ಕೇವಲ ಧನ ಸಂಪತ್ತಿಗೆ ಒಡತಿ ಎಂದೇ ಮನಸ್ಸಿಗೆ ಬರುವುದು.ಆದರೆ ಇಂದು ಲಕ್ಷ್ಮಿಯನ್ನು ಪೂಜಿಸುವುದು ಕೇವಲ ಧನ ಸಂಪತ್ತನ್ನು ಒಲಿಸಿಕೊಳ್ಳುವುದಕ್ಕಾಗಿ ಮಾತ್ರವಲ್ಲ. ಧನ, ಕನಕದ ಜೊತೆಗೆ ಧೈರ್ಯ ಲಕ್ಷ್ಮಿ,ಧಾನ್ಯ ಲಕ್ಷ್ಮಿ, ಸಂತಾನ, ವಿಜಯ