ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹೇಮಾ ಪಂಚಮುಖಿ

ಬೆಂಗಳೂರು| pavithra| Last Modified ಬುಧವಾರ, 27 ಜೂನ್ 2018 (15:55 IST)
ಬೆಂಗಳೂರು : ಅಮೇರಿಕಾ ಅಮೇರಿಕಾ ಸಿನಿಮಾದಲ್ಲಿ ಭೂಮಿ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಸ್ಸಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿರುವ
ನಟಿ ಹೇಮಾ ಪಂಚಮುಖಿ ಅವರು ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಂತೆ.


ಸ್ಯಾಂಡಲ್‌ ವುಡ್‌ ನಲ್ಲಿ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಹೇಮಾ ಅವರು ಮದುವೆ ಆಗಿ ಚಿತ್ರರಂಗದಿಂದ ದೂರ ಉಳಿದಿದ್ದರು. ನಂತರ ಹಲವಾರು ವರ್ಷಗಳು ಬಿಟ್ಟು ಮತ್ತೆ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಹೇಮಾ ಅವರು ನಟ ಪ್ರಶಾಂತ್ ಗೋಪಾಲ್ ಅವರೊಂದಿಗೆ ಎರಡನೇ ಮದುವೆ ಮಾಡಿಕೊಂಡರು .


ಇದೀಗ ಹೇಮಾ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ದಿನದಂದೇ ತಮ್ಮ ಸೀಮಂತವನ್ನು ಕೂಡ ಆಚರಿಸಿಕೊಂಡಿದ್ದಾರೆ. ಇದೀಗ ಆ ಫೋಟೊ ಫೇಸ್‌ ಬುಕ್‌ ನಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :