ಬಿಗ್ ಬಿ ಅಮಿತಾಭ್ ಬಚ್ಚನ್, ಪುತ್ರ ಅಭಿಷೇಕ್ ಗೂ ಕೊರೋನಾ: ಮುಂಬೈ ಆಸ್ಪತ್ರೆಗೆ ದಾಖಲು

ಮುಂಬೈ| Krishnaveni K| Last Modified ಭಾನುವಾರ, 12 ಜುಲೈ 2020 (09:12 IST)
ಮುಂಬೈ: ಕೊರೋನಾ ಮಹಾಮಾರಿ ಯಾರನ್ನೂ ಬಿಟ್ಟಿಲ್ಲ. ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಪುತ್ರ ಅಭಿಷೇಕ್ ಬಚ್ಚನ್ ಗೂ ಕೊರೋನಾ ತಗುಲಿರುವುದು ದೃಢಪಟ್ಟಿದೆ.
 

ನಿನ್ನೆ ತಡ ರಾತ್ರಿ ಟ್ವೀಟ್ ಮಾಡಿರುವ ಅಮಿತಾಭ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ಹೇಳಿದ್ದಾರೆ. ಇದಾದ ಬಳಿಕ ಅಭಿಷೇಕ್ ಕೂಡಾ ಟ್ವೀಟ್ ಮಾಡಿದ್ದು, ತನಗೆ ಮತ್ತು ತಂದೆ ಅಮಿತಾಭ್ ಗೆ ನಿನ್ನೆ ಸಣ್ಣ ಪ್ರಮಾಣದಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದು, ಪರೀಕ್ಷೆಗೊಳಗಾದಾಗ ಕೊರೋನಾ ಇರುವುದು ದೃಢಪಟ್ಟಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇವೆ. ನಮ್ಮ ಜತೆಗಿದ್ದವರಿಗೆಲ್ಲರೂ ಪರೀಕ್ಷೆಗೊಳಗಾಗುತ್ತಿದ್ದಾರೆ. ಗಾಬರಿ ಬೇಡ ಎಂದು ಸಂದೇಶ ಬರೆದಿದ್ದಾರೆ.
 
ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ ಅಮಿತಾಭ್ ಪತ್ನಿ, ಸಂಸದೆ ಜಯಾ ಬಚ್ಚನ್, ಅಭಿಷೇಕ್ ಪತ್ನಿ ಐಶ್ವರ್ಯಾ ಕೂಡಾ ಗಂಟಲು ದ್ರವ ಪರೀಕ್ಷೆಗೊಳಗಾಗಿದ್ದು, ಇವರಿಗೆ ನೆಗೆಟಿವ್ ವರದಿ ಬಂದಿದೆ.
ಇದರಲ್ಲಿ ಇನ್ನಷ್ಟು ಓದಿ :