Widgets Magazine

'ರುಸ್ತುಂ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಬಾಲಿವುಡ್ ನಟನ ಎಂಟ್ರಿ

ಮುಂಬೈ| pavithra| Last Modified ಭಾನುವಾರ, 15 ಜುಲೈ 2018 (15:12 IST)
ಬೆಂಗಳೂರು : ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ ನಿಂದ ಹಲವು ನಟರನ್ನು ಕರೆತರಲಾಗಿತ್ತು. ಇದೀಗ ನಟ ಶಿವರಾಜ್ ಕುಮಾರ್ ಅವರು ಅಭಿನಯಿಸುತ್ತಿರುವ 'ರುಸ್ತುಂ’ ಚಿತ್ರಕ್ಕೂ ಕೂಡ ಬಾಲಿವುಡ್ ನಟರೊಬ್ಬರನ್ನ ಕರೆತರಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ.


ಹೌದು. 'ರುಸ್ತುಂ' ಚಿತ್ರದಲ್ಲಿ ನಟಿಸಲು ಬಾಲಿವುಡ್ ನಟ ವಿವೇಕ್ ಓಬೇರಾಯ್ ಅವರನ್ನ ಕರೆತರುವ ನಿರ್ಧಾರವನ್ನು ಚಿತ್ರದ ನಿರ್ದೇಶಕ ರವಿವರ್ಮ ಅವರು ಮಾಡಿದ್ದಾರೆ. ಹಾಗೇ ಈ ಚಿತ್ರದಲ್ಲಿ ನಟಿಸಲು ವಿವೇಕ್ ಓಬೇರಾಯ್ ಅವರು ಓಕೆ ಅಂದಿದ್ದಾರೆ. ಇನ್ನು ಚಿತ್ರದ ಕುರಿತಂತೆ ಮಾತನಾಡಿರುವ ಅವರು 'ನಾನು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನನ್ನ ಪಾತ್ರದ ಬಗ್ಗೆ ನಿರ್ದೇಶಕರು ಕುತೂಹಲವನ್ನು ಹೆಚ್ಚಿಸಿದ್ದಾರೆ. ಸದ್ಯಕ್ಕೆ ನನ್ನ ಪಾತ್ರದ ಬಗ್ಗೆ ನಾನು ಹೆಚ್ಚಿಗೆ ಹೇಳುವುದಿಲ್ಲ' ಎಂದು ಹೇಳಿದ್ದಾರೆ.


ಚಿತ್ರ ಜಯಣ್ಣ ಕಂಬೈನ್ಸ್ ಅಡಿಯಲ್ಲಿ ರುಸ್ತುಂ ಚಿತ್ರವು ನಿರ್ಮಾಣವಾಗುತ್ತಿದ್ದು ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದು ನವೀನ್ ಕುಮಾರ್ ಅವರ ಛಾಯಾಗ್ರಹಣವಿದೆ. ಈಗಾಗಲೇ ಈ ಚಿತ್ರವು ತನ್ನ ಫಸ್ಟ್ ಲುಕ್ ಪೋಸ್ಟರ್ ಗಳಿಂದ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಪತ್ನಿಯಾಗಿ ಶೃದ್ಧಾ ಶ್ರೀನಾಥ್, ತಂಗಿಯಾಗಿ ಮಯೂರಿ, ಮಗಳಾಗಿ ಬಾಲನಟಿ ನೈಲಾ ಅಭಿನಯಿಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :