ನಿಕ್ ಮತ್ತು ಪಿಗ್ಗಿ ನಿಶ್ಚಿತಾರ್ಥದ ಪಾರ್ಟಿ ಈ ವಾರದ ಕೊನೆಯಲ್ಲಿ..!!

ಬೆಂಗಳೂರು| nagashree| Last Updated: ಶುಕ್ರವಾರ, 17 ಆಗಸ್ಟ್ 2018 (14:55 IST)
ಕಳೆದ ಸುಮಾರು ದಿನಗಳಿಂದ ನಿಕ್ ಜೊನಾಸ್ ಹಾಗೂ ಪಿಗ್ಗಿ ನಿಶ್ಚಿತಾರ್ಥದ ವಿಷಯವೇ ಹರಿದಾಡುತ್ತಿದೆ. ದಿನನಿತ್ಯ ಈ ಜೋಡಿಯ ಸುದ್ದಿಗಳು ಬರುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಇವರಿಬ್ಬರೂ ಎಂಗೇಜ್‌ಮೆಂಟ್ ರಿಂಗ್ ಬದಲಾಯಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಪಿಗ್ಗಿ ಈ ಕುರಿತಂತೆ ಮಾಧ್ಯಮದ ಮುಂದೆ ಯಾವುದೇ ವಿಷಯವನ್ನು ಹಂಚಿಕೊಳ್ಳಲು ಇಷ್ಟಪಟ್ಟಿರಲಿಲ್ಲ.
ಆದರೆ ಹಲವು ಮೂಲಗಳ ಪ್ರಕಾರ ಈಗ ನಿಕ್ ಹಾಗೂ ಪಿಗ್ಗಿ ಮುಂಬೈ ಅಲ್ಲಿ ಪರಸ್ಪರ ತಮ್ಮ ಕುಟುಂಬಗಳನ್ನು ಪರಿಚಯಿಸಲು ಈ ವಾರದ ಕೊನೆಯಲ್ಲಿ ಪಾರ್ಟಿ ನೀಡುತ್ತಿದ್ದಾರೆ ಎಂಬುದು ಇತ್ತೀಚಿನ ಸುದ್ದಿಯಾಗಿದೆ. 
 
ಪ್ರಿಯಾಂಕಾ ತಮ್ಮ ಕುಟುಂಬದ ಮೌಲ್ಯಗಳನ್ನು ಗೌರವಿಸಿ ಸಾಂಪ್ರದಾಯಿಕ ವಿವಾಹವನ್ನು ಇಷ್ಟಪಡುತ್ತಾರೆ ಮತ್ತು ಅದು ಖಂಡಿತವಾಗಿಯೂ ಭಾರತೀಯ ಶೈಲಿಯ ಎಂದು ಮೂಲಗಳು ತಿಳಿಸಿವೆ. 
 
ಎಲ್ಲವೂ ಬಹಳ ರಹಸ್ಯವಾಗಿ ನಡೆಯಲಿದ್ದು ನಿಕ್ ಕುಟುಂಬ ಇಂದೇ ಮುಂಬೈ ಅನ್ನು ತಲುಪಿದೆ. ನಿಕ್ ತಮ್ಮ ತಂದೆ ತಾಯಿ ಜೊತೆ ವಿಮಾನ ನಿಲ್ದಾಣದಿಂದ ಬರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು, ಇದು ಜನರಲ್ಲಿ ಇನ್ನಷ್ಟು ಕುತೂಹಲವನ್ನು ಸೃಷ್ಟಿಸಿದೆ. ಪಿಗ್ಗಿ ಮತ್ತು ನಿಕ್ ಅಭಿಮಾನಿಗಳು ಮುಂದಿನ ಅಪ್‌ಡೇಟ್‌ಗಳಿಗಾಗಿ ಕುತೂಹಲದಿಂದ ಕಾಯುವಂತಾಗಿದೆ.


ಇದರಲ್ಲಿ ಇನ್ನಷ್ಟು ಓದಿ :