ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸಿಕ್ಕಿಬಿದ್ದಿದ್ದು ಹೀಗೆ!

ಮುಂಬೈ| Krishnaveni K| Last Modified ಬುಧವಾರ, 21 ಜುಲೈ 2021 (09:21 IST)
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಬ್ಲೂ ಫಿಲಂ ನಿರ್ಮಾಣ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದೇ ವ್ಯಾಟ್ಸಪ್‍ ಚ್ಯಾಟ್ ಮೂಲಕ.
 

ಕಳೆದ ಫೆಬ್ರವರಿಯಲ್ಲೇ ರಾಜ್ ಕುಂದ್ರಾ ವಿರುದ್ಧ ದೂರು ದಾಖಲಾಗಿತ್ತು. ಇದೀಗ ರಾಜ್ ಕುಂದ್ರಾ ವಿರುದ್ಧ ಪ್ರಬಲ ಸಾಕ್ಷ್ಯ ಸಿಕ್ಕಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
 
ಇದಕ್ಕೆಲ್ಲಾ ಕಾರಣವಾಗಿದ್ದ ಬ್ರಿಟನ್ ಮೂಲದ ನಿರ್ಮಾಣ ಸಂಸ್ಥೆಯ ಮಾಲಿಕ ಪ್ರದೀಪ್ ಭಕ್ಷಿ ಎಂಬಾತನ ಜೊತೆಗಿನ ವ್ಯಾಟ್ಸಪ್ ಚ್ಯಾಟ್. ರಾಜ್ ಕುಂದ್ರಾ ಸಂಬಂಧಿಕರೂ ಆಗಿರುವ ಪ್ರದೀಪ್ ಜೊತೆಗೆ ನಡೆಸಿದ ವ್ಯಾಟ್ಸಪ್ ಸಂದೇಶಗಳೇ ಸಿಕ್ಕಿಬೀಳಲು ಕಾರಣವಾಗಿದೆ. ಪ್ರದೀಪ್ ನಡೆಸುತ್ತಿದ್ದ ಕಂಪನಿಯ ಭಾರತೀಯ ಶಾಖೆಗೆ ರಾಜ್ ಕುಂದ್ರಾ ಸಹಾಯಕ ಮುಖ್ಯಸ್ಥರಾಗಿದ್ದರು. ಆ ಸಂಸ್ಥೆ ಮೂಲಕ ಹಲವು ಪೋರ್ನ್ ಫಿಲಂಸ್ ಗೆ ಗುತ್ತಿಗೆ ನೀಡುವುದು ಮತ್ತು ಹಣಕಾಸಿನ ವ್ಯವಹಾರ ನಡೆಯುತ್ತಿತ್ತು ಎಂಬುದು ವಿಚಾರಣೆಯಲ್ಲಿ ಬಯಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :