Widgets Magazine

ಕರೀನಾ ಪುತ್ರ ತೈಮೂರ್ ಬಚಾವ್ ಆಗಬೇಕಾದರೆ ವಿರಾಟ್ ಕೊಹ್ಲಿ-ಅನುಷ್ಕಾಗೆ ಮಗುವಾಗಬೇಕಂತೆ!

ಮುಂಬೈ| Krishnaveni K| Last Modified ಶನಿವಾರ, 14 ಡಿಸೆಂಬರ್ 2019 (09:38 IST)
ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾಗೆ ಮಗುವಾದರೆ ಕರೀನಾ ಕಪೂರ್-ಸೈಫ್ ಅಲಿ ಖಾನ್ ದಂಪತಿ ಪುತ್ರ ತೈಮೂರ್ ಬಚಾವ್ ಆಗುತ್ತಾನಂತೆ!

 
ಹೀಗಂತ ಹೇಳಿದ್ದು ತೈಮೂರ್ ಅಜ್ಜಿ ಶರ್ಮಿಳಾ ಠಾಗೋರ್. ಮುದ್ದು ಗೊಂಬೆಯಂತಿರುವ ಮೂರು ವರ್ಷದ ತೈಮೂರ್ ಎಲ್ಲೇ ಹೋದರೂ, ಏನೇ ಮಾಡಿದರೂ ಕ್ಯಾಮರಾ ಕಣ್ಣುಗಳು ಹಿಂಬಾಲಿಸುತ್ತಿವೆ. ಈ ರೀತಿ ಅತಿಯಾದ ಪ್ರಚಾರದಿಂದಾಗಿ ತೈಮೂರ್ ಕೂಡಾ ಸುಸ್ತಾಗಿದ್ದಾನಂತೆ.
 
ಒಂದು ವೇಳೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿಗೆ ಮಗುವಾದರೆ ಈ ಮಾಧ್ಯಮಗಳು ಅವರ ಮಗುವಿನ ಬೆನ್ನತ್ತಲಿವೆ. ಆಗ ತೈಮೂರ್ ಮೇಲೆ ಗಮನ ಕಡಿಮೆಯಾಗಬಹುದು. ಇದರಿಂದ ತೈಮೂರ್ ಕೊಂಚ ನಿರಾಳವಾಗಬಹುದು ಎಂದು ಸಂದರ್ಶನವೊಂದರಲ್ಲಿ ಶರ್ಮಿಳಾ ತಮಾಷೆಯಾಗಿ ಹೇಳಿಕೊಂಡಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :