ಮುಂಬೈ : ಬಾಲಿವುಡ್ ನಟಿ ಇಲಿಯಾನ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವವರಿಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ತಾರೆಯರು ಹೆಚ್ಚಾಗಿ ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ. ಸಿನಿಮಾ ತಾರೆಯರು ಯಾವುದೇ ಒಂದು ವಿಚಾರವನ್ನು ಅಥವಾ ಫೊಟೋಗಳನ್ನು ಶೇರ್ ಮಾಡಿಕೊಂಡಾಗ ಅದಕ್ಕೆ ಟ್ರೋಲಿಗರು ಬಾಯಿಗೆ ಬಂದಂತೆ ಕಾಮೆಂಟ್ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಕೇರ್ ಮಾಡದ ಬಾಲಿವುಡ್ ನಟಿ ಇಲಿಯಾನ ಇದೀಗ ಇನ್ಸ್ಟಾಗ್ರಾಂನಲ್ಲಿ ತನ್ನ ಆಕರ್ಷಕ ಫೋಟೋ ಹಾಕಿದ್ದಾಳೆ.