ಚಿತ್ರದ ಟೀಸರ್ ಬಿಡುಗಡೆಗೆ ಸಿದ್ಧರಾಗಿ ಮಿಂಚಿದ 'ಕಲಂಕ್' ನಟ ನಟಿಯರು...

ಬೆಂಗಳೂರು, ಬುಧವಾರ, 13 ಮಾರ್ಚ್ 2019 (15:20 IST)

ಅಭಿಷೇಕ್ ವರ್ಮನ್ ಅವರ ಕಲಂಕ್ ಚಿತ್ರದ ಪಾತ್ರಗಳ ಪೋಸ್ಟರ್‌ಗಳನ್ನು ಬಹಿರಂಗಪಡಿಸಿದ ನಂತರ ನಿರ್ಮಾಪಕರು ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಅಭಿಮಾನಿಗಳು ತುಂಬಾ ಕಾಯುತ್ತಿರುವಾಗ ಚಿತ್ರದ ನಟರು ತಮ್ಮಷ್ಟಕ್ಕೆ ಇರಲು ಸಾಧ್ಯವಿಲ್ಲ. ಚಿತ್ರದ ಸಂಪೂರ್ಣ ಪಾತ್ರಧಾರಿಗಳು ಮತ್ತು ಸಿಬ್ಬಂದಿ ವರ್ಗದೊಂದಿಗೆ ಕರಣ್ ಜೋಹರ್ ಕಲಂಕ್ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದಾರೆ.
ಟೀಸರ್ ಬಿಡುಗಡೆಗೂ ಮುನ್ನ ಆಲಿಯಾ, ವರುಣ್, ಸೋನಾಕ್ಷಿ ಸಿನ್ಹಾ ಮತ್ತು ಆದಿತ್ಯಾ ಕೆಲವು ನಿಮಿಷಗಳ ತಮಾಷೆಯ ಸಮಯವನ್ನು ಕಳೆದಿದ್ದು, ಅದರ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಈ ಸಂದರ್ಭದಲ್ಲಿ ಆಲಿಯಾ ಮತ್ತು ವರುಣ್ ಧವನ್ ಬಿಳಿಯ ಬಣ್ಣದ ಡ್ರೆಸ್‌ನಲ್ಲಿ ಕಂಡುಬಂದರೆ, ಆದಿತ್ಯಾ ಮತ್ತು ಸೋನಾಕ್ಷಿ ಕೆಂಪು ಬಣ್ಣದ ಡ್ರೆಸ್‌ನಲ್ಲಿದ್ದರು.
 
ಈ ಚಿತ್ರವನ್ನು ಅಭಿಷೇಕ್ ವರ್ಮನ್ ನಿರ್ದೇಶಿಸುತ್ತಿದ್ದು ಕರಣ್ ಜೋಹರ್ ಮತ್ತು ಸಾಜಿದ್ ನದಿಯಾದ್ವಾಲಾ ನಿರ್ಮಾಪಕರಾಗಿದ್ದಾರೆ. ಈ ಚಿತ್ರವನ್ನು ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಆಲಿಯಾ ಭಟ್, ವರುಣ್ ಧವನ್, ಆದಿತ್ಯಾ ರಾಯ್ ಕಪೂರ್, ಸೋನಾಕ್ಷಿ ಸಿನ್ಹಾ, ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ ಕಾಣಿಸಿಕೊಳ್ಳಲಿದ್ದು ಅತಿಥಿ ಪಾತ್ರದಲ್ಲಿ ಕಿಯಾರಾ ಅಡ್ವಾನಿ ಮತ್ತು ಕೃತಿ ಸನನ್ ಸಹ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸ್ಟಾರ್ಟ್ ಆಯ್ತು ಕೆಜಿಎಫ್ 2! ಮುಹೂರ್ತಕ್ಕೆ ಬಂದವರು ಯಾರೆಲ್ಲಾ?

ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ರ ಯಶಸ್ಸಿನ ನಂತರ ಕೆಜಿಎಫ್ ಚಾಪ್ಟರ್ 2 ಯಾವಾಗ ಎಂಬ ಪ್ರಶ್ನೆಗಳಿಗೆ ...

news

ತಂದೆಯಾಗುತ್ತಿರುವ ಲೂಸ್ ಮಾದ ಯೋಗಿ! ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದು ಹೀಗೆ!

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ‘ದುನಿಯಾ’ ಸಿನಿಮಾ ಮೂಲಕ ಪರಿಚಿತರಾದ ಲೂಸ್ ಮಾದ ಯೋಗೇಶ್ ಈಗ ...

news

ಮಕ್ಕಳಾದ ಮೇಲೂ ಸೆಕ್ಸಿ ಆಗಿರಕ್ಕೆ ಕರೀನಾ ಕಪೂರ್ ಅಲ್ಲ ಎಂದ ನಟಿ ಯಾರು ಗೊತ್ತೇ?

ಮುಂಬೈ: ಮದುವೆಯಾಗಿ ಮಕ್ಕಳಾದ ಮೇಲೆ ನಟಿಯರ ಗ್ಲಾಮರ್ ಮುಗಿದು ಹೋಯಿತು ಎನ್ನುವ ಕಾಲವಿತ್ತು. ಆದರೆ ಈಗ ...

news

ದರ್ಶನ್, ಯಶ್ ಸಾಥ್ ಕೊಡೋದು ಪಕ್ಕಾ: ಕಿಚ್ಚ ಸುದೀಪ್ ಬಗ್ಗೆ ಸುಮಲತಾ ಹೇಳಿದ್ದೇನು?

ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣಾ ಕಣದಿಂದ ಸ್ಪರ್ಧೆ ಮಾಡಲಿರುವ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ...