‘ಕೆಜಿಎಫ್ 2’ : ರಿಲೀಸ್ ದಿನಾಂಕ ಮುಂದೂಡಿದ ನಟ!

ಬೆಂಗಳೂರು| Ramya kosira| Last Modified ಶನಿವಾರ, 20 ನವೆಂಬರ್ 2021 (20:35 IST)
ಯಶ್
ನಟನೆಯ ‘ಕೆಜಿಎಫ್ 2’ ಸಿನಿಮಾ ಬಗ್ಗೆ ಇರುವ ನಿರೀಕ್ಷೆ ಸಣ್ಣಮಟ್ಟದಲ್ಲ. ಪ್ರಶಾಂತ್ ನೀಲ್ ಕಸುಬುದಾರಿಕೆ ಏನು ಎಂಬುದು ‘ಕೆಜಿಎಫ್’ ಮೂಲಕ ಪ್ರೇಕ್ಷಕರಿಗೆ ಗೊತ್ತಾಗಿದೆ.
ಈ ಕಾರಣಕ್ಕೆ ‘ಕೆಜಿಎಫ್ ಚಾಪ್ಟರ್ 2’ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಜಯ್ ದತ್, ರವೀನಾ ಟಂಡನ್ ನಟಿಸಿರುವುದರಿಂದ ಸಿನಿಮಾದ ಬಲ ಹೆಚ್ಚಿದೆ. ಈ ಎಲ್ಲಾ ಕಾರಣಕ್ಕೆ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡೋಕೆ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಏಪ್ರಿಲ್ 14ರಂದು ಚಿತ್ರ ರಿಲೀಸ್ ಆಗುತ್ತಿದೆ. ಈಗ ಬಾಲಿವುಡ್ನ ಸ್ಟಾರ್ ನಟನ ಸಿನಿಮಾವೊಂದು ಸದ್ದಿಲ್ಲದೆ ರಿಲೀಸ್ ದಿನಾಂಕ ಮುಂದೂಡಿದೆ.
ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಚಿತ್ರ ಕ್ರಿಸ್ಮಸ್ ನಿಮಿತ್ತ ಡಿಸೆಂಬರ್ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಚಿತ್ರವನ್ನು ಫೆಬ್ರವರಿ ತಿಂಗಳಲ್ಲಿ ತೆರೆಗೆ ತರೋಕೆ ಪ್ಲ್ಯಾನ್ ನಡೆದಿತ್ತು. ಅದು ಕೈಗೂಡಿಲ್ಲ. ಈಗ ಏಪ್ರಿಲ್ 14ರಂದು ಆಮಿರ್ ಖಾನ್ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ದಿನ ವರುಣ್ ಧವನ್ ಅಭಿನಯದ
‘ಭೇಡಿಯಾ’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಈಗ ಈ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಲು ಸಿನಿಮಾ ತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :