ನಟಿ ಪ್ರಿಯಾಂಕಾ ಚೋಪ್ರಾ ಮನೆ ಪಕ್ಕದಲ್ಲೇ ನಡೆದಿತ್ತು ಆ 8 ಮಂದಿಯ ಮಾರಣಹೋಮ!

ನ್ಯೂಯಾರ್ಕ್| Krishnaveni| Last Modified ಗುರುವಾರ, 2 ನವೆಂಬರ್ 2017 (08:34 IST)
ನ್ಯೂಯಾರ್ಕ್: ನ್ಯೂಯಾರ್ಕ್ ನಲ್ಲಿ ನಿನ್ನೆ 8 ಜನರ ಸಾವಿಗೆ ಕಾರಣವಾಗಿದ್ದ ಭಯೋತ್ಪಾದಕ ಕೃತ್ಯ ನಡೆದಿದ್ದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮನೆ ಪಕ್ಕದಲ್ಲೇ ಎಂದು ಸ್ವತಃ ನಟಿ ಟ್ವೀಟ್ ಮಾಡಿದ್ದಾರೆ.
 
29 ವರ್ಷ ಯುವಕನೋರ್ವ ಪಿಕ್ ಅಪ್ ವಾಹನವನ್ನು ಬೇಕಾಬಿಟ್ಟಿ ಚಲಾಯಿಸಿ 8 ಮಂದಿ ಸಾವಿಗೆ ಕಾರಣವಾಗಿದ್ದ. ಈ ಘಟನೆ ತನ್ನ ಮನೆಯ ಪಕ್ಕದಲ್ಲೇ ನಡೆದಿದೆ ಎಂದು ಪ್ರಿಯಾಂಕಾ ಟ್ವಿಟರ್ ನಲ್ಲಿ ಹೇಳಿದ್ದಾರೆ.
 
ನನ್ನ ಮನೆಯಿಂದ ಕೇವಲ 5 ಕಟ್ಟಡಗಳ ಆಚೆ ಈ ಘಟನೆ ನಡೆದಿದೆ. ದಾಳಿಯಲ್ಲಿ ಮೃತರಾದವರಿಗೆ ಸಂತಾಪವ್ಯಕ್ತಪಡಿಸುತ್ತೇನೆ ಎಂದು ಪ್ರಿಯಾಂಕ ಟ್ವೀಟ್ ಮಾಡಿದ್ದಾರೆ. ದಾಳಿ ನಡೆಸಿದಾತ ಉಗ್ರನೆಂದು ಶಂಕಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :