ತನ್ನ ಜೀವನಾಧಾರಿತ ಸಿನಿಮಾಗೆ ಈ ಸ್ಟಾರ್ ನಟಿಯೇ ನಾಯಕಿಯಾಗಲಿ ಎಂದ ಪಿವಿ ಸಿಂಧು

ಹೈದರಾಬಾದ್, ಮಂಗಳವಾರ, 3 ಸೆಪ್ಟಂಬರ್ 2019 (10:25 IST)

ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಇತ್ತೀಚೆಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ ಮೇಲೆ ಆಕೆಯ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ ಚಿನ್ನದ ಹುಡುಗಿ ಜೀವನಾಧಾರಿತ ಸಿನಿಮಾವೊಂದು ಈಗ ತೆರೆಗೆ ಬರುತ್ತಿದೆ.


 
ಪಿವಿ ಸಿಂಧು ಕುರಿತಾದ ಸಿನಿಮಾ ಮಾಡಲು ಸೋನು ಸೂಧ್ ಹಕ್ಕು ಪಡೆದುಕೊಂಡಿದ್ದಾರೆ. ಇದೀಗ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಬಹುದು.
 
ಆದರೆ ಇಲ್ಲಿ ಸಿಂಧು ಪಾತ್ರ ಯಾರು ಮಾಡಬೇಕು ಎಂಬ ಪ್ರಶ್ನೆಗೆ ಸ್ವತಃ ಬ್ಯಾಡ್ಮಿಂಟನ್ ತಾರೆ ಉತ್ತರಿಸಿದ್ದಾರೆ. ತಮ್ಮ ಪಾತ್ರವನ್ನು ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಪುತ್ರಿಯೂ ಆಗಿರುವ ನಟಿ ದೀಪಿಕಾ ಪಡುಕೋಣೆ ನಿರ್ವಹಿಸಬೇಕು ಎಂದು ಸಿಂಧುಗೆ ಆಸೆಯಂತೆ. ಹೀಗಾಗಿ ದೀಪಿಕಾರೇ ಈ ಪಾತ್ರ ಮಾಡಿದರೂ ಅಚ್ಚರಿಯಿಲ್ಲ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಜನೀಕಾಂತ್ 2.0 ದಾಖಲೆ ಮುರಿದ ಸಾಹೋ

ಹೈದರಾಬಾದ್: ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ...

news

ಎರಡೇ ದಿನಕ್ಕೆ ನೂರು ಕೋಟಿ ದಾಟಿದ ಸಾಹೋ

ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಾಹೋ ಸಿನಿಮಾ ನೂರು ಕೋಟಿ ಕ್ಲಬ್ ...

news

ಸತತ ಎರಡನೇ ಬಾರಿಗೆ ಅಗ್ನಿಸಾಕ್ಷಿ ಚಂದ್ರಿಕಾಳೇ ಬೆಸ್ಟ್ ವಿಲನ್!

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್ ಸಮಾರಂಭ ನಡೆದಿದ್ದು, ಈ ಬಾರಿಯೂ ಅಗ್ನಿಸಾಕ್ಷಿ ...

news

ನೇತ್ರ ಶಿಬಿರಕ್ಕೆ ನೆರವಾದ ಪುನೀತ್ ರಾಜ್ ಕುಮಾರ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಾಗ ಕಷ್ಟದಲ್ಲಿರುವ ಅಭಿಮಾನಿಗಳಿಗೆ ನೆರವಾಗುವ ಮೂಲಕ ...