ಪೋರ್ನ್ ವಿಡಿಯೋ ಕೇಸ್: ರಾಜ್ ಕುಂದ್ರಾಗೀಗ ಹೊಸ ತಲೆನೋವು!

ಮುಂಬೈ| Krishnaveni K| Last Modified ಭಾನುವಾರ, 25 ಜುಲೈ 2021 (10:09 IST)
ಮುಂಬೈ: ಪೋರ್ನ್ ವಿಡಿಯೋ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾಗೆ ಈಗ ಮತ್ತೊಂದು ತಲೆನೋವು ಶುರುವಾಗಿದೆ.
Photo Courtesy: Google

 
ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ ರಾಜ್ ಕುಂದ್ರಾ ವಿರುದ್ಧ ಈಗ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸುವ ಸಾಧ‍್ಯತೆಯಿದೆ.
 
ಅಕ್ರಮ ಹಣವರ್ಗಾವಣೆ, ವಿದೇಶೀ ವಿನಿಮಯ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ರಾಜ್ ಕುಂದ್ರಾ ವಿರುದ್ಧ ಕೇಸ್ ದಾಖಲಿಸುವುದು ನಿಚ್ಚಳವಾಗಿದೆ. ತನಿಖೆಯ ವೇಳೆ ಹಣಕಾಸಿನ ವಿಚಾರವಾಗಿ ಹಲವು ಅಕ್ರಮಗಳು ನಡೆದಿರುವುದು ಪೊಲೀಸರಿಗೆ ತಿಳಿದುಬಂದಿದೆ ಎನ್ನಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಇಡಿ ಪ್ರವೇಶ ಮಾಡಲಿದೆ.
ಇದರಲ್ಲಿ ಇನ್ನಷ್ಟು ಓದಿ :