Widgets Magazine

ಇಬ್ಬರು ಹಳೇ ಲವ್ವರ್ ಗಳಲ್ಲಿ ಯಾರನ್ನು ಮರೆಯುತ್ತೀರಿ ಎಂಬ ಪ್ರಶ್ನೆಗೆ ಶಾಹಿದ್ ಕಪೂರ್ ಹೇಳಿದ್ದೇನು ಗೊತ್ತಾ?

ಮುಂಬೈ| Krishnaveni K| Last Modified ಮಂಗಳವಾರ, 15 ಜನವರಿ 2019 (09:05 IST)
ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿರುವ ಬಾಲಿವುಡ್ ನಟ ಶಾಹಿದ್ ಕಪೂರ್ ಗೆ ಟ್ರಿಕ್ಕಿ ಪ್ರಶ್ನೆಯೊಂದನ್ನು ಕರಣ್ ಜೋಹರ್ ಕೇಳಿದ್ದು, ಇದಕ್ಕೆ ಶಾಹಿದ್ ಕೂಡಾ ಅಷ್ಟೇ ಜಾಣ್ಮೆಯಿಂದ ಉತ್ತರಿಸಿದ್ದಾರೆ.

 
ಶಾಹಿದ್ ಮೀರಾ ರಜಪೂತ್ ವಿವಾಹವಾಗುವ ಮೊದಲು ಪ್ರಿಯಾಂಕ ಚೋಪ್ರಾ ಮತ್ತು ಕರೀನಾ ಕಪೂರ್ ಜತೆ ಸುತ್ತಾಡಿದ್ದರು. ಇಬ್ಬರ ಜತೆಗೂ ಶಾಹಿದ್ ಗೆ ಬ್ರೇಕ್ ಅಪ್ ಆಗಿತ್ತು. ಆದರೆ ಇದೀಗ ಈ ಹಳೇ ಲವ್ ವಿಚಾರವನ್ನು ಕರಣ್ ತಮ್ಮ ಶೋನಲ್ಲಿ ಕೆದಕಿದ್ದಾರೆ.
 
ಇಬ್ಬರು ಮಾಜಿ ಪ್ರೇಮಿಗಳ ಪೈಕಿ ಯಾರನ್ನು ನೀವು ಮರೆಯಲು ಬಯಸುತ್ತೀರಿ ಎಂದು ಕರಣ್ ಕೇಳಿದ್ದಾರೆ. ಇದಕ್ಕೆ ಜಾಣ್ಮೆಯಿಂದ ಉತ್ತರಿಸಿರುವ ಶಾಹಿದ್, ಹಳೆಯ ಹಲವು ಘಟನೆಗಳಿಂದ ನಾನು ಈವತ್ತು ಒಬ್ಬ ಮನುಷ್ಯನಾಗಿದ್ದೇನೆ. ಹಾಗಾಗಿ ಯಾವುದೇ ಹಳೆಯ ಘಟನೆಗಳನ್ನು ಮರೆಯಲು ಬಯಸುವುದಿಲ್ಲ ಎಂದರು.
 
ಆದರೆ ಇಷ್ಟಕ್ಕೇ ಸುಮ್ಮನಾಗದ ಕರಣ್ ಪ್ರಿಯಾಂಕ, ಕರೀನಾ ಇವರಲ್ಲಿ ಯಾರು ಹೆಚ್ಚು ಟ್ಯಾಲೆಂಟೆಡ್ ಎಂದು ಪ್ರಶ್ನಿಸಿದರು. ಇದಕ್ಕೆ ಮತ್ತೆ ಜಾಣತನ ಪ್ರದರ್ಶಿಸಿದ ಶಾಹಿದ್ ಕರೀನಾ ಹೆಚ್ಚು ಪ್ರತಿಭಾವಂತೆ. ನನ್ನ ಪ್ರಕಾರ ಪ್ರಿಯಾಂಕ ಹೆಚ್ಚು ಪರಿಶ್ರಮಿ ಮತ್ತು ಕಮಿಟೆಡ್ ನಟಿ’ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :