ಸಮೀರ್ ವಾಂಖೆಡೆ ವಿರುದ್ಧ ಸೇಡು ತೀರಿಸಿಕೊಳ್ತಾರಾ ಶಾರುಖ್ ಖಾನ್?

ಮುಂಬೈ| Krishnaveni K| Last Modified ಬುಧವಾರ, 24 ನವೆಂಬರ್ 2021 (09:10 IST)
ಮುಂಬೈ: ಪುತ್ರ ಆರ್ಯನ್ ಖಾನ್ ರನ್ನು ಡ್ರಗ್ ಕೇಸ್ ನಲ್ಲಿ ಬಂಧಿಸಿದ್ದ ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ನಟ ಶಾರುಖ್ ಖಾನ್ ಸೇಡು ತೀರಿಸಿಕೊಳ್ಳಲಿದ್ದಾರೆಯೇ? ಹೀಗೊಂದು ಸುದ್ದಿ ಹರಿದಾಡುತ್ತಿದೆ.

ಆರ್ಯನ್ ಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯ ಜಾಮೀನು ನೀಡಲು ಕಾರಣವೇನೆಂದು ವಿವರಣೆ ನೀಡಿದೆ. ಈ ವಿವರಣೆಯಲ್ಲಿ ಆರ್ಯನ್ ಡ್ರಗ್ ಕೇಸ್ ನಲ್ಲಿ ಶಾಮೀಲಾಗಿದ್ದಾರೆ ಎಂಬುದಕ್ಕೆ ಎನ್ ಸಿಬಿ ಹೇಳುವಂತೆ ಯಾವುದೇ ಪುರಾವೆ ಕಂಡುಬರುತ್ತಿಲ್ಲ ಎಂದಿದೆ.


ಈ ಒಂದು ಹೇಳಿಕೆಯನ್ನಿಟ್ಟುಕೊಂಡು ಎಸ್ ಆರ್ ಕೆ ತಮ್ಮ ಪುತ್ರನನ್ನು ಜೈಲಿಗೆ ತಳ್ಳಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬಹುದು ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಪ್ರಕಟಣೆ ಬಂದಿಲ್ಲ.


ಇದರಲ್ಲಿ ಇನ್ನಷ್ಟು ಓದಿ :