ಪತಿ ಮಾಡಿದ ಕೆಲಸದಿಂದ ಶಿಲ್ಪಾ ಶೆಟ್ಟಿಗೆ ಮುಖ ತೋರಿಸಲಾಗುತ್ತಿಲ್ಲ

ಮುಂಬೈ| Krishnaveni K| Last Modified ಬುಧವಾರ, 28 ಜುಲೈ 2021 (09:10 IST)
ಮುಂಬೈ: ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದು, ಪತ್ನಿ, ನಟಿ ಶಿಲ್ಪಾ ಶೆಟ್ಟಿ ಮೇಲೆ ಪರಿಣಾಮ ಬೀರಿದೆ.
 

ಇದುವರೆಗೆ ಸೋನಿ ಟಿವಿಯ ಡ್ಯಾನ್ಸ್ ರಿಯಾಲಿಟಿ ಶೋ ಜಡ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆ ಶೋನ ಪ್ರಮುಖ ಆಕರ್ಷಣೆಯಾಗಿದ್ದರು. ಆದರೆ ಈಗ ಪತಿ ಮಾಡಿದ ಕೆಲಸದಿಂದ ಅವರು ಮುಜುಗರಕ್ಕೀಡಾಗಿದ್ದಾರೆ.
 
ಪತಿಯ ಮೇಲೆ ಬಂದಿರುವ ಆಪಾದನೆಯಿಂದಾಗಿ ಶಿಲ್ಪಾ ಈಗ ಡ್ಯಾನ್ಸ್ ಶೋಗೂ ಬಂದಿಲ್ಲ. ರಾಜ್ ಕುಂದ್ರಾ ಪ್ರಕರಣದಲ್ಲಿ ಪೊಲೀಸರು ಶಿಲ್ಪಾ ನಿವಾಸಕ್ಕೆ ಬಂದು ಅವರನ್ನೂ ವಿಚಾರಣೆಗೊಳಪಡಿಸಿದ್ದರು. ಈ ಪ್ರಕರಣದಿಂದ ಆಘಾತಕ್ಕೊಳಗಾಗಿರುವ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :