ಪ್ರಿಯಾಂಕ ಚೋಪ್ರಾಳನ್ನು 'ಜಾಗತಿಕ ವಂಚನೆಯ ನಟಿ' ಎಂದು ಹೇಳಿದ್ಯಾರು ಗೊತ್ತಾ?

ನವದೆಹಲಿ, ಗುರುವಾರ, 6 ಡಿಸೆಂಬರ್ 2018 (11:02 IST)

ನವದೆಹಲಿ : ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರನ್ನು ಅಮೆರಿಕದ ನ್ಯೂಯಾರ್ಕ್ ನಿಯತಕಾಲಿಕೆಯೊಂದು 'ಜಾಗತಿಕ ವಂಚನೆಯ ನಟಿ' ಎಂದು ಕರೆದಿದೆ.


ನಟಿ ಪ್ರಿಯಾಂಕ ಚೋಪ್ರಾ ಅಮೇರಿಕಾದ ಸಿಂಗರ್ ನಿಕ್ ಜೋನಸ್ ಅವರನ್ನು ಪ್ರೀತಿಸಿ ಇತ್ತಿಚೆಗಷ್ಟೇ ವಿವಾಹವಾದರು. ಆದರೆ ಅಮೆರಿಕದ ನ್ಯೂಯಾರ್ಕ್ ನಿಯತಕಾಲಿಕೆ 'ದ ಕಟ್‌' ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ  ಲೇಖನವೊಂದರಲ್ಲಿ ಪ್ರಿಯಾಂಕ, ನಿಕ್ ನನ್ನು ವಂಚಿಸಿ ಮದುವೆಯಾಗಿದ್ದಾರೆ ಎನ್ನಲಾಗಿದೆ.


ಈ ಬಗ್ಗೆ ಮಾರಿಯಾ ಸ್ಮಿತ್‌ ಅವರು 'ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನ್ಸ್‌ ಪ್ರೀತಿ ನಿಜವೇ?' ಎಂಬ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದು, ನಿಕ್‌ ಜೋನ್ಸ್‌ ಇಚ್ಛೆಗೆ ವಿರುದ್ಧವಾಗಿ ಮೋಸದ ಸಂಬಂಧವನ್ನು ಪ್ರಿಯಾಂಕಾ ಹೊಂದಿದ್ದಾರೆ.


ಹಾಲಿವುಡ್‌ನ ಹೊಸ ನಟಿಯೊಂದಿಗೆ ಹೆಜ್ಜೆ ಹಾಕಲು ನಿಕ್‌ ಬಯಸಿದ್ದರು. ಆದರೆ, ಜಾಗತಿಕ ವಂಚನೆಯ ನಟಿಯಿಂದ ವಿವಾಹವೆಂಬ ಜೀವಾವಧಿ ಶಿಕ್ಷೆಗೆ ಒಳಗಾಗಬೇಕಾಯಿತು. ಪ್ರಿಯಾಂಕಾ ಹಣದ ಹಿಂದೆ ಬಿದ್ದಿರುವ ಸೆಲೆಬ್ರಿಟಿ. ವಿನೀತ ಸ್ವಭಾವದ ಜೋನ್ಸ್‌ರನ್ನು ಹಣ ಹಾಗೂ ಅಧಿಕಾರಕ್ಕಾಗಿ ಪ್ರಿಯಾಂಕಾ ವಿವಾಹ ಆಗಿದ್ದಾರೆ ಎಂದು ಬರೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಟ್ರೋಲಿಗರ ಬಾಯಿಗೆ ಆಹಾರವಾದ ಕೆ.ಜಿ.ಎ.ಫ್ ಚಿತ್ರದ 'ಸಲಾಂ ರಾಕಿ ಭಾಯ್' ಹಾಡು

ಮುಂಬೈ : ಇತ್ತೀಚೆಗೆ ಬಿಡುಗಡೆಯಾದ ನಟ ಯಶ್ ಅಭಿನಯದ ಕೆ.ಜಿ.ಎ.ಫ್ ಚಿತ್ರದ ಮೊದಲ ಹಾಡೊಂದು ಇದೀಗ ಟ್ರೋಲಿಗರ ...

news

ಪ್ರಿಯಾಂಕ-ನಿಕ್​​ ​ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಮಂಗಳವಾರ ದೆಹಲಿಯಲ್ಲಿ ಅದ್ದೂರಿಯಾಗಿ ನಡೆದ ಪ್ರಿಯಾಂಕಾ-ನಿಕ್​​ ​ಆರತಕ್ಷತೆ ಕಾರ್ಯಕ್ರಮಕ್ಕೆ ...

news

ಪೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸೆಲೆಬ್ರಿಟಿ ಯಾರು ಗೊತ್ತಾ?

ಮುಂಬೈ : 2018 ನೇ ಸಾಲಿನ ಭಾರತೀಯ ಸೆಲೆಬ್ರಿಟಿ ಪಟ್ಟಿಯಲ್ಲಿ ಬಾಲಿವುಡ್ ನ ನಟರೊಬ್ಬರು ಅಗ್ರಸ್ಥಾನವನ್ನು ...

news

‘ದಮಯಂತಿ’ ಚಿತ್ರಕ್ಕೆ ನಟಿ ರಾಧಿಕಾ ತೆಗೆದುಕೊಂಡ ಸಂಭಾವನೆ ಕೇಳಿದರೆ ಶಾಕ್ ಆಗ್ತೀರಾ

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ರಾಧಿಕಾ ಅವರು ತಮ್ಮ ಮುಂಬರುವ ‘ದಮಯಂತಿ’ ಚಿತ್ರಕ್ಕೆ ತೆಗೆದುಕೊಂಡ ...