ಕೇರಳ ಸಂತ್ರಸ್ತರ ನೆರವಿಗೆ 14 ಕೋಟಿ ರೂ ಹಣ ಕೊಟ್ಟ ಕಾಲಿವುಡ್ ನ ನಟ ಯಾರು ಗೊತ್ತಾ?

ಚೆನ್ನೈ| pavithra| Last Modified ಮಂಗಳವಾರ, 21 ಆಗಸ್ಟ್ 2018 (15:03 IST)
ಚೆನ್ನೈ : ಕೇರಳದಲ್ಲಿ
ಪ್ರವಾಹ ಸಂತ್ರಸ್ತರ ನೆರವಿಗೆ ಹಲವು ನಟ ನಟಿಯರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಅದೇರೀತಿ ಇದೀಗ ಕಾಲಿವುಡ್ ಸ್ಟಾರ್ ನಟ ವಿಜಯ್ ಅವರು ಪ್ರವಾಹ ಸಂತ್ರಸ್ತರಿಗೆ ತಮ್ಮ ಹಸ್ತ ಚಾಚಿದ್ದಾರೆ.


ಕೇರಳದಲ್ಲಿ ಮಹಾಮಳೆಗೆ ಪ್ರವಾಹ ಉಂಟಾಗಿ ಅನೇಕ ಮಂದಿ ಸಾವನಪ್ಪಿದ್ದಾರೆ.
ಹಲವು ಜನರು ಮನೆಮಟ್ಟವನ್ನು ಕಳೆದುಕೊಂಡಿದ್ದಾರೆ. ಇವರ ಸಹಾಯಕ್ಕೆ ಇದೀಗ ಕಾಲಿವುಡ್ ನಟ ವಿಜಯ್ ಅವರು ದೊಡ್ಡ ಮೊತ್ತದ ಹಣವನ್ನು ನೀಡಿ ಮಾನವೀಯತೆ ಮರೆದಿದ್ದಾರೆ.


ನಟ ವಿಜಯ್ ಅವರು ಸಂತ್ರಸ್ತರ ನಿಧಿಗೆ ಬರೋಬರಿ 14 ಕೋಟಿ ರೂ. ನೀಡಿದ್ದಾರೆ. ಇಷ್ಟು ದೊಡ್ಡ ಮೊತ್ತವನ್ನು ಬೇರೆ ಯಾವ ನಟರು ನೀಡಿಲ್ಲ ಎಂಬುದು ಗಮನಾರ್ಹವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :